Publish Date: Fri, 29 Jul 2022 (08:30 IST)
Updated Date: Fri, 29 Jul 2022 (09:00 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ನಿರ್ಮಿಸಿ, ನಟಿಸಿದ್ದ 777 ಚಾರ್ಲಿ ಸಿನಿಮಾ ಥಿಯೇಟರ್ ನಲ್ಲಿ ನೋಡಲು ಸಾಧ‍್ಯವಾಗದೇ ಇದ್ದವರಿಗೆ ಇಂದಿನಿಂದ ಮತ್ತೊಂದು ಅವಕಾಶ ಸಿಗಲಿದೆ.
ಇಂದಿನಿಂದ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ವೂಟ್ ಆಪ್ ನಲ್ಲಿ 777 ಚಾರ್ಲಿ ಇಂದಿನಿಂದ ಪ್ರಸಾರವಾಗಲಿದೆ.
ಚಾರ್ಲಿ ಎಂಬ ನಾಯಿ ಮತ್ತು ಧರ್ಮ ಎಂಬ ವ್ಯಕ್ತಿಯ ನಡುವೆ ನಡೆಯುವ ಭಾವುಕ ಪಯಣದ ಕತೆ ಇದಾಗಿದ್ದು, ನಾಯಿ ಪ್ರಿಯರಿಗೆ ಭಾರೀ ಇಷ್ಟವಾಗಿದೆ. ಚಿತ್ರ ಥಿಯೇಟರ್ ನಲ್ಲಿ 100 ಕೋಟಿ ಕಲೆಕ್ಷನ್ ಮಾಡಿತ್ತು. ಈಗ ಒಟಿಟಿಯಲ್ಲಿ ಮೋಡಿ ಮಾಡಲು ಹೊರಟಿದೆ.