Publish Date: Wed, 07 Jul 2021 (09:31 IST)
Updated Date: Wed, 07 Jul 2021 (09:14 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಥಿಯೇಟರ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿರುವ ಮೊದಲ ಸಿನಿಮಾ ಯಾವುದಾಗಿರಬಹುದು?
ಹಲವು ಸ್ಟಾರ್ ನಟರ ಸಿನಿಮಾಗಳೇ ಬಿಡುಗಡೆಗೆ ಸಾಲುಗಟ್ಟಿ ನಿಂತಿದೆ. ಹೀಗಿರುವಾಗ ಓಪನಿಂಗ್ ಯಾರದ್ದು ಎಂಬ ಚರ್ಚೆ ಗಾಂಧಿನಗರದಲ್ಲಿ ನಡೆದಿದೆ.
ಈಗಾಗಲೇ ದುನಿಯಾ ವಿಜಯ್ ಸಲಗ ಸಿನಿಮಾ ಬಿಡುಗಡೆಗೆ ಕಾದು ನಿಂತಿದೆ. ಒಂದು ವೇಳೆ ಶೇ. 100 ರಷ್ಟು ಪ್ರೇಕ್ಷಕರಿಗೆ ಅನುಮತಿ ಕೊಟ್ಟು ಥಿಯೇಟರ್ ಓಪನ್ ಆದರೆ ಮೊದಲು ಬಿಡುಗಡೆಯಾಗುವ ಸಿನಿಮಾ ನಮ್ಮದೇ ಎಂದು ಈಗಾಗಲೇ ಸಲಗ ಟೀಂ ಹೇಳಿಕೊಂಡಿದೆ. ಕೋಟಿಗೊಬ್ಬ 3 ಕೂಡಾ ಲಿಸ್ಟ್ ನಲ್ಲಿ ಮುಂಚೂಣಿಯಲ್ಲೇ ಇದೆ. ಈ ಎರಡು ಸಿನಿಮಾಗಳ ಪೈಕಿ ಯಾವುದು ಮೊದಲು ಥಿಯೇಟರ್ ಗೆ ಬರಲಿದೆ ಎಂದು ಕಾದು ನೋಡಬೇಕಿದೆ.