Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಳ್ಳೆ ಕೆಲಸಕ್ಕೆ ಕೂದಲಿಗೆ ಕತ್ತರಿ ಹಾಕಿದ ನಟಿ ಕಾವ್ಯಾ ಶಾಸ್ತ್ರಿ

ಒಳ್ಳೆ ಕೆಲಸಕ್ಕೆ ಕೂದಲಿಗೆ ಕತ್ತರಿ ಹಾಕಿದ ನಟಿ ಕಾವ್ಯಾ ಶಾಸ್ತ್ರಿ
ಬೆಂಗಳೂರು , ಮಂಗಳವಾರ, 6 ಜುಲೈ 2021 (10:00 IST)
ಬೆಂಗಳೂರು: ಕನ್ನಡ ಕಿರುತೆರೆ ಖ್ಯಾತ ನಟಿ, ನಿರೂಪಕಿ ಕಾವ್ಯಾ ಶಾಸ್ತ್ರಿ ಒಂದೊಳ್ಳೆ ಕೆಲಸಕ್ಕೆ ತಮ್ಮ ಉದ್ದ ಕೂದಲಿಗೆ ಕತ್ತರಿ ಹಾಕಿದ್ದಾರೆ.


ಇತ್ತೀಚೆಗಷ್ಟೇ ಪ್ಲಾಸ್ಮಾ ದಾನ ಮಾಡಿ ಸುದ್ದಿಯಾಗಿದ್ದ ನಟಿ ಕಾವ್ಯಾ ಶಾಸ್ತ್ರಿ ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ದಾನ ಮಾಡಿದ್ದಾರೆ. ಪ್ಲಾಸ್ಮಾ ದಾನ ಮಾಡಿದ್ದ ಕಾವ್ಯಾ ಇತರರಿಗೂ ಪ್ಲಾಸ್ಮಾ ದಾನ ಮಾಡಿ ಕೊರೋನಾ ರೋಗಿಗಳಿಗೆ ನೆರವಾಗಲು ಮನವಿ ಮಾಡಿದ್ದರು.

ಇದೀಗ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳಿಗೆ ನೆರವಾಗಲು ಮುಂದಾಗಿದ್ದಾರೆ. ‘ಕ್ಯಾನ್ಸರ್ ನಿಂದ ನನ್ನ ಚಿಕ್ಕಪ್ಪನನ್ನು ಕಳೆದುಕೊಂಡೆ. ಆ ನೋವನ್ನು ಹತ್ತಿರದಿಂದ ನೋಡಿದ್ದೇನೆ. ಹೀಗಾಗಿ ಕೂದಲು ದಾನ ಮಾಡಲು ನಿರ್ಧರಿಸಿದ್ದೇನೆ. ಒಂದೊಳ್ಳೆ ಕೆಲಸಕ್ಕೆ ನಾನು ಮುಂದಾಗಿದ್ದೇನೆ. ನೀವೂ ಈ ಕೆಲಸಕ್ಕೆ ಕೈ ಜೋಡಿಸಿ’ ಎಂದು ಕಾವ್ಯಾ ಮನವಿ ಮಾಡಿದ್ದಾರೆ. ಅವರ ಈ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ದುನಿಯಾ ವಿಜಯ್ ತಾಯಿ ಸ್ಥಿತಿ ಗಂಭೀರ