Publish Date: Sat, 16 Oct 2021 (09:20 IST)
Updated Date: Sat, 16 Oct 2021 (09:35 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಹಾಡಿನ ಶೋ ಸರಿಗಮಪ ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ ಆಗಮಿಸಿದ್ದಾರೆ.
ಈ ದಸರಾ ಹಬ್ಬದ ಸಂದರ್ಭದಲ್ಲಿ ಪ್ರಸಾರವಾಗಲಿರುವ ಎಪಿಸೋಡ್ ನಲ್ಲಿ ಶಿವಣ್ಣ ಅತಿಥಿಯಾಗಿ ಭಾಗಿಯಾಗಿದ್ದು, ಸ್ಪರ್ಧಿಗಳ ಹಾಡುಗಳನ್ನು ಎಂಜಾಯ್ ಮಾಡಿದ್ದಾರೆ.
ವಿಶೇಷವೆಂದರೆ ಶಿವಣ್ಣ ಕೂಡಾ ಹಾಡಿಗೆ ಧ್ವನಿಗೂಡಿಸಿದ್ದು, ಡೈಲಾಗ್ ಗಳ ಮೂಲಕ ಮನರಂಜಿಸಿದ್ದಾರೆ. ಸಾಮಾನ್ಯವಾಗಿ ಶಿವಣ‍್ಣ ನೃತ್ಯ, ಟಾಕ್ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಹಾಡಿನ ಶೋನಲ್ಲಿ ಕಾಣಿಸಿಕೊಂಡಿರುವುದು ಅಪರೂಪ. ಈ ಸ್ಮರಣೀಯ ಎಪಿಸೋಡ್ ಇಂದು ಮತ್ತು ನಾಳೆ ಪ್ರಸಾರವಾಗಲಿದೆ.