Publish Date: Sat, 02 Oct 2021 (10:07 IST)
Updated Date: Sat, 02 Oct 2021 (10:09 IST)
ಬೆಂಗಳೂರು: ಮೊನ್ನೆಯಷ್ಟೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನಲಾದ ನಟಿ ಸವಿ ಮಾದಪ್ಪ ಅಲಿಯಾಸ್ ಸೌಜನ್ಯ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸವಿ ಮಾದಪ್ಪ ಗೆಳೆಯ ವಿವೇಕ್ ಹಾಗೂ ಮೇಕಪ್ ಮ್ಯಾನ್ ನನ್ನು ಪೊಲೀಸರು ನಿನ್ನೆ ವಶಕ್ಕೆ ಪಡೆದಿದ್ದರು. ಬಳಿಕ ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ. ಇಬ್ಬರ ನಡುವೆ ಮನಸ್ತಾಪವಿತ್ತೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ತನಿಖೆ ನಡೆಸಿದ್ದಾರೆ.
ವಿವೇಕ್ ವಿರುದ್ಧ ಸವಿ ಮಾದಪ್ಪ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಮಗಳ ಬಳಿಯಿದ್ದ 6 ಲಕ್ಷ ರೂ. ಹಣ, ಚಿನ್ನಾಭರಣಗಳನ್ನು ವಿವೇಕ್ ತೆಗೆದುಕೊಂಡಿದ್ದಾನೆ. ಆತ ಮದುವೆಗಾಗಿ ಪೀಡಿಸುತ್ತಿದ್ದ ಎಂದು ದೂರಿನಲ್ಲಿ ಹೇಳಿದ್ದರು. ಈ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.