Publish Date: Mon, 11 Oct 2021 (10:12 IST)
Updated Date: Mon, 11 Oct 2021 (10:18 IST)
ಬೆಂಗಳೂರು: ನಾನು ಅವರನ್ನು ತುಂಬಾ ಲವ್ ಮಾಡ್ತೀನಿ. ಬಹಳ ಹಿಂದಿನಿಂದಲೂ ನಾವು ಲವರ್ಸ್..! ಹೀಗಂತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಲಗ ಪ್ರಿ ರಿಲೀಸ್ ಈವೆಂಟ್ ವೇದಿಕೆಯಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಶಿವಣ್ಣ ಹೀಗಂತ ಹೇಳಿದ್ದು ಯಾರಿಗೆ ಗೊತ್ತಾ?!
ಹೀಗಂತ ಶಿವಣ್ಣ ಹೇಳಿದ್ದು, ರಿಯಲ್ ಸ್ಟಾರ್ ಉಪೇಂದ್ರ ಬಗ್ಗೆ. ಓಂ ಸಿನಿಮಾ ಸಂದರ್ಭದಲ್ಲಿ ಯಾವಾಗಲೂ ಕೂದಲು ಕಣ್ಣಿಗೆ ತಾಕುವಂತೆ ಎದುರು ಹಾಕಿಕೊಳ್ಳಲು ಹೇಳುತ್ತಿದ್ದರು. ಆಗ ನನಗೆ ಅವರ ಮೇಲೆ ಕೋಪ ಬರುತ್ತಿತ್ತು. ಆಗ ಅವರು ಶಿವಣ್ಣ ನಿಮ್ಮನ್ನು ರಥಸಪ್ತಮಿ ಕಾಲದಿಂದಲೂ ಲವ್ ಮಾಡ್ತೀನಿ ಎಂದಿದ್ರು. ಆ ಬಳಿಕ ನಾವು ಲವರ್ಸ್ ತರ ಇದ್ದೇವೆ. ನಾನು ಯಾವಾಗಲೂ ಅವರನ್ನು ಪ್ರೀತಿಸುತ್ತೇನೆ ಎಂದು ಉಪೇಂದ್ರ ಬಗ್ಗೆ ಶಿವಣ್ಣ ಹೇಳಿದ್ದಾರೆ.
ಇನ್ನು, ಸಲಗ ಪ್ರಿ ರಿಲೀಸ್ ಈವೆಂಟ್ ನಲ್ಲಿ ನಾಯಕ ದುನಿಯಾ ವಿಜಯ್ ಮತ್ತು ತಂಡಕ್ಕೆ ಶುಭ ಹಾರೈಸಲು ಗಣ್ಯರ ದಂಡೇ ಬಂದಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಶಿವರಾಜ್ ಕುಮಾರ್, ಉಪೇಂದ್ರ, ಪುನೀತ್ ರಾಜ್ ಕುಮಾರ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅಕ್ಟೋಬರ್ 14 ಕ್ಕೆ ಸಲಗ ತೆರೆ ಕಾಣುತ್ತಿದೆ.