Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಏಕದಿನ ವಿಶ್ವಕಪ್ ನಲ್ಲಿ ಇಂದು ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಕನ್ನಡದಲ್ಲಿ ನಟ ಶಿವರಾಜ್ ಕುಮಾರ್ ಕಾಮೆಂಟರಿ ಮಾಡಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಗಾಗಿ ಶಿವಣ್ಣ ಕನ್ನಡದಲ್ಲಿ ಕಾಮೆಂಟರಿ ಮಾಡಿದ್ದಾರೆ. ಪಾಕಿಸ್ತಾನ ಬ್ಯಾಟಿಂಗ್ ಮಾಡಿದ್ದಾಗ ಅವರು ಅಂದಾಜು 270 ರನ್ ಹೊಡೆಯಬಹುದು. 225 ರನ್ ದಾಟಬಾರದು ಎಂದಿದ್ದರು. ಅದರಂತೆ ಪಾಕ್ 191 ರನ್ ಗಳಿಗೆ ಆಲೌಟ್ ಆಯಿತು.
ಶಿವರಾಜ್ ಕುಮಾರ್ ಗೆ ಕ್ರಿಕೆಟ್ ಎಂದರೆ ಆಸಕ್ತಿ. ಈ ಹಿಂದೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇದೀಗ ಘೋಸ್ಟ್ ಸಿನಿಮಾ ಪ್ರಚಾರ ನಿಮಿತ್ತ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.