Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಂಡನ ಈ ಸಾಧನೆ ಬಗ್ಗೆ ರಕ್ಷಿತಾ ಪ್ರೇಮ್ ಗೆ ಹೆಮ್ಮೆಯಂತೆ

ಗಂಡನ ಈ ಸಾಧನೆ ಬಗ್ಗೆ ರಕ್ಷಿತಾ ಪ್ರೇಮ್ ಗೆ ಹೆಮ್ಮೆಯಂತೆ
ಬೆಂಗಳೂರು , ಬುಧವಾರ, 19 ಆಗಸ್ಟ್ 2020 (11:18 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ‘ಜೋಗಿ’ ಸಿನಿಮಾ ರಿಲೀಸ್ ಆಗಿ 15 ವರ್ಷ ಕಳೆದ ಹಿನ್ನಲೆಯಲ್ಲಿ ನಟಿ ರಕ್ಷಿತಾ ಪ್ರೇಮ್ ತಮ್ಮ ಗಂಡ ಪ್ರೇಮ್ ನಿರ್ದೇಶನದ ಬಗ್ಗೆ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.


ಜೋಗಿ ಸಿನಿಮಾಗೆ 15 ವರ್ಷವಾದ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಿಡಿಪಿ ಬಿಡುಗಡೆ ಮಾಡಲಾಗಿದೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ರಕ್ಷಿತಾ ಪ್ರೇಮ್ ನನ್ನ ಗಂಡನ ಈ ಸಿನಿಮಾ ಬಗ್ಗೆ ನನಗೆ ಎಂದೆಂದಿಗೂ ಹೆಮ್ಮೆಯಿದೆ ಎಂದು ಬರೆದುಕೊಂಡಿದ್ದಾರೆ.

ಪ್ರೇಮ್ ಮಾಡಿದ ಅತ್ಯದ್ಭುತ ಸಿನಿಮಾವೆಂದರೆ ಇದು. ಯಾವತ್ತೂ ನನಗೆ ಅವರ ಬಗ್ಗೆ ಹೆಮ್ಮೆಯಿದೆ. ಶಿವರಾಜ್ ಕುಮಾರ್ ಅಣ್ಣನ ‘ಮಾದೇಶ’ ಪಾತ್ರ, ಗುರುಕಿರಣ್ ಅವರ ಮ್ಯಾಜಿಕಲ್ ಸಂಗೀತ ಯಾರು ತಾನೇ ಮರೆಯಲು ಸಾಧ್ಯ? ದಿಗ್ಗಜರ ತಂಡವೇ ಇತ್ತು.  ಈ ಸುಂದರ ನೆನಪುಗಳಿಗೆ ಧನ್ಯವಾದಗಳು ಎಂದು ರಕ್ಷಿತಾ ಸ್ಮರಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್.ಪಿಬಿ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ ರಂಜನೀಕಾಂತ್