ಮುಂಬೈ: ಕೊರೋನಾವೈರಸ್ ಹಿನ್ನಲೆಯಲ್ಲಿ ಐಪಿಎಲ್ ನಡೆಸಬೇಕೋ ರದ್ದುಗೊಳಿಸಬೇಕೋ ಎಂಬ ವಾದಗಳ ಬೆನ್ನಲ್ಲೇ ಸದ್ಯಕ್ಕೆ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕ್ರಿಕೆಟಿಗ ಜೋಗಿಂದರ್ ಶರ್ಮಾ ಉತ್ತರಿಸಿದ್ದಾರೆ.
ಹರ್ಯಾಣದಲ್ಲಿ ಡಿವೈಎಸ್ ಪಿ ಹುದ್ದೆ ನಿರ್ವಹಿಸುತ್ತಿರುವ ಜೋಗಿಂದರ್ 2007 ಟಿ20 ವಿಶ್ವಕಪ್ ಫೈನಲ್ ಗೆಲುವಿನ ರೂವಾರಿ. ಇವರೀಗ ಪೊಲೀಸ್ ಆಗಿ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ.
ಈ ವೇಳೆ ಐಪಿಎಲ್ ನಡೆಸಬೇಕೇ, ಬೇಡವೇ ಎಂಬ ಪ್ರಶ್ನೆಗೆ ‘ಕೊರೋನಾ ಮುಕ್ತವಾಗುವವರೆಗೂ ಐಪಿಎಲ್ ಖಂಡಿತಾ ನಡೆಸುವುದು ಬೇಡ. ಒಂದು ವೇಳೆ ಈಗ ಐಪಿಎಲ್ ಆಯೋಜಿಸಿದರೆ ಜನ ಖಂಡಿತಾ ಪಂದ್ಯ ನೋಡಲು ಬರುತ್ತಾರೆ. ಒಂದು ತಂಡದಲ್ಲಿ 15 ಆಟಗಾರಿರುತ್ತಾರೆ. ಇವರೆಲ್ಲಾ ಟೀಂ ಮೀಟಿಂಗ್ ಎಂದೆಲ್ಲಾ ಸೇರಿದರೂ ಅಪಾಯವಾಗುತ್ತದೆ. ಕೊರೋನಾ ಮುಕ್ತವಾದ ಮೇಲೆ ಖಂಡಿತಾ ಆಯೋಜಿಸಲಿ’ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ.