Publish Date: Tue, 21 Jul 2020 (13:02 IST)
Updated Date: Tue, 21 Jul 2020 (13:05 IST)
ಬೆಂಗಳೂರು: ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನ್ನು ಆಳಿದ ನಾಯಕಿ ನಟಿಯರಾದ ರಕ್ಷಿತಾ ಮತ್ತು ರಮ್ಯಾ ನಡುವೆ ಕೋಳಿ ಜಗಳ ನಡೆಯುತ್ತಲೇ ಇತ್ತು. ಆದರೆ ಈಗ ಇಬ್ಬರೂ ಫ್ರೆಂಡ್ಸ್ ಆಗಿಬಿಟ್ಟಿದ್ದಾರೆ.
ರಮ್ಯಾ ಈಗ ಹಲವು ಸಮಯದ ನಂತರ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಆಗಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ರಮ್ಯಾ ಹಾಗೂ ರಕ್ಷಿತಾ ಈಗ ಪರಸ್ಪರರ ಖಾತೆಗಳನ್ನು ಫಾಲೋ ಮಾಡಲು ಪ್ರಾರಂಭಿಸಿದ್ದಾರೆ. ಆ ಮೂಲಕ ತಮ್ಮ ಹಳೆಯ ಕೋಳಿ ಜಗಳಗಳನ್ನೆಲ್ಲಾ ಮರೆತಿದ್ದು, ನಾವಿಬ್ಬರೂ ಈಗ ಸ್ನೇಹಿತರು ಎಂದು ಸಾರಿದ್ದಾರೆ.