Publish Date: Sun, 24 Jan 2021 (09:14 IST)
Updated Date: Sun, 24 Jan 2021 (09:16 IST)
ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮದುವೆ ಮನೆಯೊಂದರಲ್ಲಿ ಟಪ್ಪಾಂಗುಚ್ಚಿ ಹಾಡಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಲೆಗೆ ಪೇಟ ತೊಟ್ಟುಕೊಂಡು ನೃತ್ಯಗಾರರ ಜೊತೆ ಪುನೀತ್ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡುವ ವಿಡಿಯೋ ನೋಡಿ ಅಭಿಮಾನಿಗಳೂ ಖುಷಿಪಟ್ಟಿದ್ದಾರೆ. ಡ್ಯಾನ್ಸ್ ಎಂದರೆ ತುಂಬಾ ಇಷ್ಟಪಡುವ ಪವರ್ ಸ್ಟಾರ್ ಆತ್ಮೀಯರ ಮದುವೆ ಮನೆಯಲ್ಲೂ ಕುಣಿತ ಹಾಕುವುದನ್ನು ಮರೆತಿಲ್ಲ.