Publish Date: Sun, 24 Jan 2021 (07:42 IST)
Updated Date: Sun, 24 Jan 2021 (07:43 IST)
ಬೆಂಗಳೂರು: ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 25 ವರ್ಷ ಪೂರ್ತಿಯಾದ ಹಿನ್ನಲೆಯಲ್ಲಿ ಫ್ಯಾಂಟಮ್ ಚಿತ್ರತಂಡ ಬುರ್ಜ್ ಖಲೀಫಾದಲ್ಲಿ ಚಿತ್ರದ ಟೈಟಲ್ ಲೋಗೋ ಮಾಡಲು ನಿರ್ಧರಿಸಿದೆ.
ಈ ವಿದ್ಯಮಾನ ಜನವರಿ 31 ರಂದು ನಡೆಯಲಿದ್ದು, ದುಬೈನ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಸುಮಾರು 180 ಸೆಕೆಂಡುಗಳ ಕಾಲ ಫ್ಯಾಂಟಮ್ ಸಿನಿಮಾದ ಸುದೀಪ್ ಪಾತ್ರ ವಿಕ್ರಾಂತ್ ರೋಣನ ಕಟೌಟ್ ಪ್ರದರ್ಶನವಾಗಲಿದೆ. ಇದನ್ನು ಸುದೀಪ್ ಟ್ವಿಟರ್ ಪೇಜ್ ಮತ್ತು ಕಿಚ್ಚ ಕ್ರಿಯೇಷನ್ಸ್ ಯೂ ಟ್ಯೂಬ್ ಪುಟದಲ್ಲಿ ರಾತ್ರಿ 9 ಗಂಟೆಗೆ ನೇರಪ್ರಸಾರ ವೀಕ್ಷಿಸಬಹುದು.