ಬೆಂಗಳೂರು: ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ-ರೇವತಿ ದಂಪತಿ ಸದ್ಯದಲ್ಲೇ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ನಿಖಿಲ್ ಪತ್ನಿ ರೇವತಿ ಇದೀಗ ಐದು ತಿಂಗಳ ಗರ್ಭಿಣಿ. ಇಂದು ರೇವತಿ ಹುಟ್ಟುಹಬ್ಬವಿದ್ದು, ಇದರ ಜೊತೆಗೇ ಸಿಹಿ ಸುದ್ದಿಯೂ ಹೊರಬಂದಿದೆ. ಕಳೆದ ವರ್ಷ ಲಾಕ್ ಡೌನ್ ವೇಳೆ ನಿಖಿಲ್-ರೇವತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಇದೀಗ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಾತನಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ತುಂಬು ಗರ್ಭಿಣಿ ಪತ್ನಿ ರೇವತಿಯ ಜನ್ಮದಿನವನ್ನು ನಿಖಿಲ್ ವಿಕಲಚೇತನರೊಂದಿಗೆ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.