Publish Date: Mon, 21 Jun 2021 (09:10 IST)
Updated Date: Mon, 21 Jun 2021 (09:13 IST)
ಬೆಂಗಳೂರು: ಇತ್ತೀಚೆಗಷ್ಟೇ ಕೊರೋನಾದಿಂದ ನಿಧನರಾದ ಪತಿ, ನಿರ್ಮಾಪಕ ಕೋಟಿ ರಾಮು ಅವರನ್ನು ನೆನೆದು ಪತ್ನಿ, ನಟಿ ಮಾಲಾಶ್ರೀ ಭಾವುಕರಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬರೆದಿದ್ದಾರೆ.
ನಿನ್ನೆ ರಾಮು ಜನ್ಮ ದಿನವಿತ್ತು. ಈ ಸಂಬಂಧ ಮಾಲಾಶ್ರೀ ಭಾವುಕರಾಗಿ ಪತಿಗೆ ಹುಟ್ಟುಹಬ್ಬದ ಶುಭಾಶಯದ ಜೊತೆಗೆ ಸಂದೇಶವನ್ನೂ ಬರೆದಿದ್ದಾರೆ.
ನೀವು ನನ್ನ ಉಸಿರಲ್ಲಿ ಉಸಿರಾಗಿದ್ದಿರಿ. ನನ್ನ ಪಾಲಿಗೆ ದೇವರಾಗಿದ್ದಿರಿ. 23 ವರ್ಷಗಳ ಕಾಲ ನಿಮ್ಮ ಹುಟ್ಟುಹಬ್ಬವನ್ನು ನನ್ನ ಹುಟ್ಟುಹಬ್ಬವಾಗಿ ಆಚರಿಸಿ, ನನ್ನ ಉಸಿರಲ್ಲಿ ಉಸಿರಾಗಿದ್ದಿರಿ. ದಿನ ರಾತ್ರಿ ಆಗು ಹೋಗುಗಳನ್ನು ಆಲಿಸಿ, ನನಗೆ ಬುದ್ಧಿ ಹೇಳುವ ಗುರುಗಳಾಗಿದ್ರಿ. ಮಕ್ಕಳ ಜೀವನ ರೂಪಿಸಿದ ಪರ್ಫೆಕ್ಟ್ ತಂದೆಯಾಗಿದ್ದಿರಿ. ನೀವು ದೂರವಾದ ಕ್ಷಣದಿಂದ ಈ ಪತ್ರ ಬರೆಯುವವರೆಗೂ ಪ್ರತಿ ಕ್ಷಣವೂ ಕಣ್ಣಲ್ಲಿ ನೀರು ಹೆಪ್ಪುಗಟ್ಟುತ್ತಾನೇ ಇದೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮಾಲಾಶ್ರೀ ಭಾವುಕರಾಗಿ ಬರೆದಿದ್ದಾರೆ.