Publish Date: Sun, 20 Jun 2021 (09:32 IST)
Updated Date: Sun, 20 Jun 2021 (09:34 IST)
ಬೆಂಗಳೂರು: ಇಂದು ಅಪ್ಪಂದಿರ ದಿನ. ಈ ದಿನಕ್ಕೆ ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡೊಂದರ ಉಡುಗೊರೆ ನೀಡಿದ್ದಾರೆ.
ತಾವು ಬಾಲ ನಟನಾಗಿ ನಟಿಸಿ, ಹಾಡಿದ್ದ ಬಾನ ದಾರಿಯಲ್ಲಿ ಹಾಡನ್ನು ಹಾಡಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಎಲ್ಲಾ ಅಪ್ಪಂದಿರಿಗೂ ಶುಭಾಶಯ ಕೋರಿದ್ದಾರೆ.
ಪುನೀತ್ ಅಲ್ಲದೆ, ನಟ ರಮೇಶ್ ಅರವಿಂದ್, ನಟಿ ತಾರಾ ಸೇರಿದಂತೆ ಹಲವರು ಅಪ್ಪಂದಿರ ದಿನಕ್ಕೆ ಶುಭಾಶಯ ಕೋರಿದ್ದಾರೆ. ನೆಟ್ಟಿಗರೂ ತಮ್ಮ ಸಾಮಾಜಿಕ ಜಾಲತಾಣ ಪುಟಗಳ ಮೂಲಕ ಅಪ್ಪಂದಿರ ಬಗ್ಗೆ ವಿಶೇಷ ಸಾಲುಗಳನ್ನು ಬರೆದು ವಿಶ್ ಮಾಡುತ್ತಿದ್ದಾರೆ.