ಹೈದರಾಬಾದ್ : ಏ.24ಅನ್ನು ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಅವರು ತೆಲುಗಿನವರಿಗೆ ಅತಿಯಾದ ಹೆಮ್ಮೆಯನ್ನು ತಂದುಕೊಟ್ಟಂತಹ ದಿನವೆಂದು ಹೇಳಿದ್ದಾರೆ.
ಇದಕ್ಕೆ ಕಾರಣವೇನೆಂದರೆ ಈ ದಿನದಂದು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಆಂಧ್ರದ ಮೂಲದ ಎನ್.ವಿ.ರಮಣ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ಬಗ್ಗೆ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ ಚಿರಂಜೀವಿ , ನ್ಯಾಯಮೂರ್ತಿಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. 40 ವರ್ಷಗಳ ಬಳಿಕ ಎನ್.ವಿ.ರಮಣ ಅವರು ತಮ್ಮ ವೃತ್ತಿ ಜೀವನದ ಉನ್ನತ ಹಂತಕ್ಕೆ ತಲುಪಿದ್ದಾರೆ ಎಂದು ತಿಳಿಸಿದ್ದಾರೆ.