ಹೈದರಾಬಾದ್ : 3 ವರ್ಷಗಳ ಬಳಿಕ ಟಾಲಿವುಡ್ ಗೆ ಮರುಪ್ರವೇಶ ಮಾಡಿದ ಪವನ್ ಕಲ್ಯಾಣ್ ವೇಣು ಶ್ರೀರಾಮ್ ನಿರ್ದೇಶನದ ವಕೀಲ್ ಸಾಬ್ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರ ಏಪ್ರಿಲ್ 9ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಆದರೆ ಇಂತಹ ಸ್ಟಾರ್ ನಟನ ಚಿತ್ರವನ್ನು ಕಡಿಮೆ ಬಜೆಟ್ ನ ಜತಿ ರತ್ನಲು ಚಿತ್ರ ಸೋಲಿಸಿದೆ ಎನ್ನಲಾಗಿದೆ.
ಹಿಂದಿ ಪಿಂಕ್ ಚಿತ್ರದ ರಿಮೇಕ್ ಆದ ವಕೀಲ್ ಸಾಬ್ ಚಿತ್ರ ಯುಎಸ್ ಎ ನಲ್ಲಿ ಸುಮಾರು 750 ಕೆ ಡಾಲರ್ ಸಂಗ್ರಹಿಸಿದೆ. ಆಸ್ಟ್ರೇಲಿಯಾದಲ್ಲಿ ಈ ಚಿತ್ರ 295ಕೆ ಡಾಲರ್ ಗಳನ್ನು ಸಂಗ್ರಹಿಸಿದೆ.
ಆದರೆ ಜತಿ ರತ್ನಲು ಚಿತ್ರ ಯುಎಸ್ ಎ ನಲ್ಲಿ ಸುಮಾರು 1 ಮಿಲಿಯನ್ ಡಾಲರ್ ಸಂಗ್ರಹಿಸಿದೆ. ಆಸ್ಟ್ರೇಲಿಯಾದಲ್ಲಿ ಈ ಚಿತ್ರ 315ಕೆ. ಡಾಲರ್ ಗಳಿಸಿದೆ. ಹಾಗಾಗಿ ವಿದೇಶದಲ್ಲಿ ವಕೀಲ್ ಸಾಬ್ ಚಿತ್ರಕ್ಕಿಂತ ಜತಿ ರತ್ನಲು ಚಿತ್ರ ಉತ್ತಮ ಪ್ರದರ್ಶನ ನೀಡಿದೆ ಎನ್ನಲಾಗಿದೆ.