ಹೈದರಾಬಾದ್ : ಯುವ ನಟ ಆದಿ ಸಾಯಿಕುಮಾರ್ ಅವರು ಮುಂಬರುವ ದೊಡ್ಡ ಬಜೆಟ್ ಚಿತ್ರ ಅಮರನ್ ಚಿತ್ರಕ್ಕಾಗಿ ಸಜ್ಜಾಗಿದ್ದಾರೆ. ಇದರಲ್ಲಿ ಅವರು ಅವಿಕಾ ಗೋರ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರಂತೆ.
ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಬಾಲವೀರ್ ಎಸ್ ನಿರ್ದೇಶನ ಮಾಡಲಿದ್ದಾರಂತೆ. ಹಾಗೇ ಎಸ್ ವಿಆರ್ ಪ್ರೊಡಕ್ಷನ್ ಪಿವಿಟಿ ಎಲ್ ಟಿಡಿ ನಿರ್ಮಾಣ ಮಾಡಲಿದ್ದಾರಂತೆ, ಆದರೆ ಜೆಮಿನಿ ಪ್ರಸ್ತುತಪಡಿಸಲಿದ್ದಾರೆ ಎನ್ನಲಾಗಿದೆ.
ಈ ಚಿತ್ರದ ಔಪಚಾರಿಕ ಪೂಜೆ ವಿಧಾನ ಇತ್ತೀಚೆಗೆ ಹೈದರಾಬಾದ್ ನ ಚಲನಚಿತ್ರ ಕಚೇರಿಯಲ್ಲಿ ನೇರವೇರಿತು. ಈ ಕಾರ್ಯಕ್ರಮದಲ್ಲಿ ನಾಯಕ ನಾಯಕಿ ಇಬ್ಬರು ಪಾಲ್ಗೊಂಡಿದ್ದು, ನಿರ್ಮಾಪಕರು ಅವರ ಮೇಲೆ ಮುಹೂರ್ತ ಶಾಟ್ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.