Publish Date: Wed, 27 Jan 2021 (08:51 IST)
Updated Date: Wed, 27 Jan 2021 (08:53 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಏಪ್ರಿಲ್ ಅಂತ್ಯಕ್ಕೆ ರಿಲೀಸ್ ಆಗಲಿದ್ದು, ಅದಕ್ಕೂ ಮೊದಲು ಕೋಟೆ ನಾಡಿನಲ್ಲಿ ಅದ್ಧೂರಿಯಾಗಿ ಅಡಿಯೋ ಲಾಂಚ್ ನಡೆಯಲಿದೆ.
ಕೋಟೆ ನಾಡು ಚಿತ್ರದುರ್ಗದಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಜನರ ಸಮ್ಮುಖದಲ್ಲಿ ಅಡಿಯೋ ಲಾಂಚ್ ಮಾಡಲು ನಿರ್ಮಾಪಕ ಸೂರಪ್ಪ ಬಾಬು ತೀರ್ಮಾನಿಸಿದ್ದಾರೆ. ಇದರ ದಿನಾಂಕ ನಿಗದಿಯಾಗಿಲ್ಲ. ಆದರೆ ಏಪ್ರಿಲ್ ಮೊದಲ ವಾರದಲ್ಲಿ ನಡೆಯುವುದು ಪಕ್ಕಾ ಆಗಿದೆ.