Publish Date: Mon, 25 Jan 2021 (09:44 IST)
Updated Date: Mon, 25 Jan 2021 (09:47 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಕೃಷಿ ಇಲಾಖೆಯ ರಾಯಭಾರಿಯಾಗಿದ್ದಾರೆ. ಕೃಷಿ ಸಚಿವ ಬಿಸಿ ಪಾಟೀಲ್, ದರ್ಶನ್ ಗೆ ಈ ಗೌರವ ನೀಡಿದ್ದಾರೆ. ಇದಕ್ಕೆ ಅವರು ಯಾವುದೇ ಸಂಭಾವನೆ ಪಡೆದಿಲ್ಲ ಎನ್ನುವುದು ವಿಶೇಷ.
ಮೈಸೂರಿನಲ್ಲಿರುವ ಡಿ ಬಾಸ್ ಫಾರಂ ಹೌಸ್ ಗೆ ಭೇಟಿ ನೀಡಿದ ಕೃಷಿ ಸಚಿವ ಬಿಸಿ ಪಾಟೀಲ್ ಅಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ, ಪಶುಸಂಗೋಪನೆ ಮಾಡುವುದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ದರ್ಶನ್ ನಟರಾದರೂ ಕೃಷಿ, ಪ್ರಾಣಿ, ಪಕ್ಷಿಗಳ ಸಾಕಣೆ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ತಮ್ಮ ಹೆಚ್ಚಿನ ಸಮಯವನ್ನೂ ಫಾರಂ ಹೌಸ್ ನಲ್ಲೇ ಕಳೆಯುತ್ತಾರೆ. ಹೀಗಾಗಿ ಅವರಿಗೆ ಕೃಷಿ ಇಲಾಖೆಯ ರಾಯಭಾರಿ ಎಂಬ ಗೌರವ ಸಿಕ್ಕಿದೆ.