Publish Date: Tue, 26 Jan 2021 (08:54 IST)
Updated Date: Tue, 26 Jan 2021 (08:56 IST)
ಬೆಂಗಳೂರು: ಬೆಲ್ ಬಾಟಂ ಸಿನಿಮಾದಲ್ಲಿ ನಟನಾಗಿಯೂ ಗೆದ್ದ ರಿಷಬ್ ಶೆಟ್ಟಿ ಈಗ ಅದರ ಎರಡನೇ ಭಾಗ ಮಾಡಲು ಹೊರಟಿದ್ದಾರೆ. ಬೆಲ್ ಬಾಟಂ 2 ನೇ ಭಾಗದ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್ ಆಗಿದೆ.
ಜನವರಿ 27 ರಂದು ಅಂದರೆ ನಾಳೆ ಬೆಲ್ ಬಾಟಂ 2 ನೇ ಭಾಗದ ಟೈಟಲ್ ಅನಾವರಣಗೊಳ್ಳಲಿದೆ. ಡಿಟೆಕ್ಟಿವ್ ದಿವಾಕರನ ಹೊಸ ಸಾಹಸವೇನು ಎಂದು ಊಹಿಸಿ ಎಂದು ಚಿತ್ರತಂಡ ಈಗಾಗಲೇ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದೆ. ರಿಷಬ್ ಕೊಟ್ಟಿರುವ ಸುಳಿವು ನೋಡಿ ಹೊಸ ಕೇಸ್ ಇದು ಕ್ಯೂರಿಯಸ್ ಕೇಸ್ ಆಫ್ ಚೆಂಡು ಹೂವಾ ಇರಬಹುದಾ ಅಂತಲೂ ಕೆಲವರು ಪ್ರಶ್ನೆ ಮಾಡಿದ್ದಾರೆ. ಅಂತೂ ಕ್ರಿಯೇಟಿವ್ ತಂಡ ಮತ್ತೊಮ್ಮೆ ತೆರೆ ಮೇಲೆ ರಂಜಿಸಲು ಬರುತ್ತಿದೆ.