ಹೈದರಾಬಾದ್: ಕಾಂತಾರ ಚಾಪ್ಟರ್ 1 ಪ್ರಮೋಷನ್ ಇಂದಿನಿಂದ ಆರಂಭವಾಗಲಿದ್ದು, ಹೈದರಾಬಾದ್ ನಲ್ಲಿ ರಿಷಬ್ ಶೆಟ್ಟಿಗೆ ಜ್ಯೂ ಎನ್ ಟಿರ್ ಸಾಥ್ ನೀಡಲಿದ್ದಾರೆ.
ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಬಹು ಭಾಷೆಗಳಲ್ಲಿ ತೆರೆಗೆ ಬರಲಿದೆ. ಈ ಸಿನಿಮಾ ಸುಮಾರು 7 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಇಂದಿನಿಂದ ಚಿತ್ರತಂಡ ಅಧಿಕೃತವಾಗಿ ಪ್ರಮೋಷನ್ ನಲ್ಲಿ ತೊಡಗಿಸಿಕೊಳ್ಳಲಿದೆ.
ಕೊಚ್ಚಿ, ಚೆನ್ನೈ ಬಳಿಕ ಹೈದರಾಬಾದ್ ಹಾಗೂ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ರಿಷಬ್ ಶೆಟ್ಟಿ ಆಂಡ್ ಟೀಂ ಪ್ರಮೋಷನ್ ನಡೆಸಲಿದೆ. ಇನ್ನು ಹೈದರಾಬಾದ್ ನಲ್ಲಿ ಪ್ರಿ ರಿಲೀಸ್ ಈವೆಂಟ್ ಅದ್ಧೂರಿಯಾಗಿ ನಡೆಯಲಿದ್ದು, ಜ್ಯೂ. ಎನ್ ಟಿಆರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿದುಬಂದಿದೆ.
ರಿಷಬ್ ಶೆಟ್ಟಿ ಜೊತೆಗೆ ಜ್ಯೂ ಎನ್ ಟಿಆರ್ ಗೆ ವಿಶೇಷ ಬಾಂಧವ್ಯವಿದೆ. ಈ ಹಿಂದೆ ಕುಂದಾಪುರಕ್ಕೆ ಭೇಟಿ ನೀಡಿದ್ದ ಜ್ಯೂ ಎನ್ ಟಿಆರ್ ರಿಷಬ್ ಕುಟುಂಬದವರ ಜೊತೆ ಕಾಡು-ಮೇಡು, ದೇವಾಲಯಗಳನ್ನು ಸುತ್ತಾಡಿದ್ದರು. ಇದೀಗ ಅದೇ ಸ್ನೇಹದಿಂದ ಕಾಂತಾರ ಸಿನಿಮಾಗೆ ಜ್ಯೂ ಎನ್ ಟಿಆರ್ ಸಾಥ್ ನೀಡಲಿದ್ದಾರೆ.