Publish Date: Fri, 08 Oct 2021 (08:55 IST)
Updated Date: Fri, 08 Oct 2021 (08:57 IST)
ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರೀ ಸುದ್ದಿಯೊಂದು ಹರಿದಾಡುತ್ತಿದೆ.
ಕಾಜಲ್ ತಮ್ಮ ಇನ್ ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಸದ್ಯದಲ್ಲೇ ಪ್ರಮುಖ ಸುದ್ದಿಯೊಂದನ್ನು ಹೇಳಲಿದ್ದೇನೆ. ಕಾಯುತ್ತಿರಿ ಎಂದು ಬರೆದುಕೊಂಡಿದ್ದೇ ಗುಸು ಗುಸು ಹಬ್ಬಲು ಕಾರಣವಾಗಿದೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಗೌತಮ್-ಕಾಜಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ ಎಂಬ ರೂಮರ್ ಗಳಿವೆ. ಬಹುಶಃ ತಮ್ಮ ಮೊದಲ ವರ್ಷದ ಆನಿವರ್ಸರಿ ದಿನವೇ ಕಾಜಲ್ ಈ ಸುದ್ದಿಯನ್ನು ಘೋಷಿಸಬಹುದು ಎಂದು ಈಗ ನೆಟ್ಟಿಗರು ಊಹಿಸಿದ್ದಾರೆ.