Publish Date: Thu, 07 Oct 2021 (09:25 IST)
Updated Date: Thu, 07 Oct 2021 (09:30 IST)
ಬೆಂಗಳೂರು: ಪ್ರಜ್ವಲ್ ದೇವರಾಜ್-ಅದಿತಿ ಪ್ರಭುದೇವ ಅಭಿನಯದ ಮಾಫಿಯಾ ಸಿನಿಮಾಗೆ ನಿರ್ದೇಶಕರ ಬದಲಾವಣೆಯಾಗಿದೆ.
ಈ ಮೊದಲು ಈ ಸಿನಿಮಾವನ್ನು ಗುರುದತ್ತ ಗಾಣಿಗ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಆದರೆ ಈಗ ನಿರ್ದೇಶಕರು ಬದಲಾಗಿದ್ದು, ಮಮ್ಮಿ ಸಿನಿಮಾ ಖ್ಯಾತಿಯ ಲೋಹಿತ್ ಎಚ್. ಬಂದಿದ್ದಾರೆ.
ನವಂಬರ್ 1 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಬೆಂಗಳೂರು ಮೈಸೂರು, ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ. ಇದಕ್ಕೂ ಮೊದಲು ಚಿತ್ರದ ಇತರ ಪಾತ್ರವರ್ಗದ ಆಯ್ಕೆ ನಡೆಯಲಿದೆ.