Publish Date: Thu, 07 Oct 2021 (17:40 IST)
Updated Date: Thu, 07 Oct 2021 (17:41 IST)
ಬೆಂಗಳೂರು: ಕೋಟಿಗೊಬ್ಬ 3 ಸಿನಿಮಾದ ಟ್ರೈಲರ್ ಕೊನೆಗೂ ರಿಲೀಸ್ ಆಗಿದೆ. ಇಂದು ಚಿತ್ರತಂಡ ಟ್ರೈಲರ್ ನ್ನು ಅನಾವರಣಗೊಳಿಸಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಟ್ರೈಲರ್ ತುಂಬಾ ಕಿಚ್ಚ ಸುದೀಪ್ ರ ಭರ್ಜರಿ ಫೈಟಿಂಗ್ ಎದ್ದು ಕಾಣುತ್ತಿದೆ. ಜೊತೆಗೊಂದು ಮುದ್ದು ಲವ್ ಸ್ಟೋರಿ ಇದ್ದ ಹಾಗಿದೆ. ಇದರ ಜೊತೆಗೆ ತರ್ಲೆ ಮಾಡುವ ಮಕ್ಕಳ ಗುಂಪು.
ಅಕ್ಟೋಬರ್ 14 ಕ್ಕೆ ಚಿತ್ರ ಥಿಯೇಟರ್ ನಲ್ಲಿ ರಿಲೀಸ್ ಆಗಲಿದ್ದು, ಟ್ರೈಲರ್ ನೋಡಿದರೆ ಪಕ್ಕಾ ಎಂಟರ್ ಟೈನ್ ಮೆಂಟ್, ಪೈಸಾ ವಸೂಲಿ ಸಿನಿಮಾವೆನಿಸುತ್ತದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಟ್ರೈಲರ್ ಲಕ್ಷ ವೀಕ್ಷಣೆ ದಾಟಿ ಮುನ್ನಗ್ಗುತ್ತಿದೆ.