Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿದರೂ ಅವರ ಮೇಲಿನ ಅಭಿಮಾನ ಅಭಿಮಾನಿಗಳಿಗೆ ಕಡಿಮೆಯಾಗಿಲ್ಲ. ಬದಲಿಗೆ ಹೆಚ್ಚಾಗಿದೆ ಎನ್ನಬಹುದು.
ಮಾರ್ಚ್ 17 ರಂದು ಪುನೀತ್ ಹುಟ್ಟುಹಬ್ಬವಿದ್ದು, ಪವರ್ ಸ್ಟಾರ್ ಇಲ್ಲದೇ ಅವರ ಹುಟ್ಟುಹಬ್ಬದ ಸ್ಮರಣೆಯನ್ನು ಅಭಿಮಾನಿಗಳು ಅದ್ಧೂರಿಯಾಗಿ ಮಾಡಲು ತಯಾರಿ ನಡೆಸುತ್ತಿದ್ದಾರೆ. ಈ ದಿನ ಪುನೀತ್ ಕೊನೆಯದಾಗಿ ಅಭಿನಯಿಸಿದ್ದ ಜೇಮ್ಸ್ ಸಿನಿಮಾ ಬಿಡುಗಡೆಯಾಗಲಿದೆ.
ಇದರ ಜೊತೆಗೆ ಅಂದು ಅಪ್ಪು ಸ್ಮರಣಾರ್ಥ ಅನ್ನದಾನ, ವೃದ್ಧರಿಗೆ ಬಟ್ಟೆ ವಿತರಣೆ, ಗಿಡ ನೆಡುವ ಕಾರ್ಯಕ್ರಮ ಮತ್ತು ವೀರೇಶ್ ಚಿತ್ರಮಂದಿರ ಬಳಿ ಅಪ್ಪು ಬೃಹತ್ ಕಟೌಟ್ ಹಾಕಿ ಅದಕ್ಕೆ ಹೆಲಿಕಾಪ್ಟರ್ ನಿಂದ ಪುಷ್ಪಾರ್ಚನೆ ಮಾಡಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಅಪ್ಪು ಇಲ್ಲದಿದ್ದರೂ ಅವರ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.