Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ನಟಿ ಶ್ರುತಿ ಹರಿಹರನ್ ಇನ್ ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದ್ದು, ಈ ಖಾತೆಯಿಂದ ಸ್ಯಾಂಡಲ್ ವುಡ್ ಸ್ನೇಹಿತರಿಗೆ ಇಲ್ಲಸಲ್ಲದ ಸಂದೇಶ ರವಾನೆಯಾಗಿದೆ.
ಇದರ ಬೆನ್ನಲ್ಲೇ ಶ್ರುತಿ ಹರಿಹರನ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನನ್ನ ಖಾತೆ ಹ್ಯಾಕ್ ಆಗಿದೆ. ನನ್ನ ಖಾತೆಯಿಂದ ಯಾವುದೇ ವೈಯಕ್ತಿಕ ಸಂದೇಶ ಬಂದರೂ ಪರಿಗಣಿಸಬೇಡಿ ಎಂದು ಶ್ರುತಿ ಮನವಿ ಮಾಡಿದ್ದಾರೆ.
ಹ್ಯಾಕ್ ಆದ ಖಾತೆಯಿಂದ ನಟಿ ರಮ್ಯಾ ಸೇರಿದಂತೆ ಹಲವರಿಗೆ ಲಿಂಕ್ ಜೊತೆಗೆ ಶ್ರುತಿ ಕಳುಹಿಸಿದಂತೆ ಕಿಡಿಗೇಡಿಗಳು ಮತ್ತಷ್ಟು ಸೆಲೆಬ್ರಿಟಿಗಳ ಖಾತೆ ಹ್ಯಾಕ್ ಮಾಡುವ ಉದ್ದೇಶದಿಂದ ಕಳುಹಿಸಿದ್ದರು. ಆದರೆ ರಮ್ಯಾ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ನನ್ನ ಖಾತೆಗೆ ಎರಡು ಬಾರಿ ವೆರಿಫಿಕೇಷನ್ ಆಗಿದೆ. ಹೀಗಾಗಿ ಬಚಾವ್ ಆಗಿದ್ದೇನೆ. ಶ್ರುತಿ ಹೇಳುತ್ತಿರುವುದು ಸತ್ಯ. ಅವರ ಖಾತೆ ಹ್ಯಾಕ್ ಆಗಿದೆ. ಯಾರೇ ಆದರೂ ಇಂತಹ ಲಿಂಕ್ ಬಂದರೆ ಓಪನ್ ಮಾಡಬೇಡಿ ಎಂದು ರಮ್ಯಾ ಫೋಟೋ ಸಮೇತ ಹೇಳಿಕೊಂಡಿದ್ದಾರೆ.