Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಬೈ ಟು ಲವ್ ಸಿನಿಮಾ ನಾಯಕ ಧನ್ವೀರ್ ವಿರುದ್ಧ ಸೆಲ್ಫೀ ಕೇಳಲು ಬಂದ ಅಭಿಮಾನಿ ಮೇಲೆ ಹಲ್ಲೆ ನಡೆಸಿದ ಆರೋಪ ಬಂದಿದೆ. ಘಟನೆ ಕುರಿತಂತೆ ಧನ್ವೀರ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಫೆಬ್ರವರಿ 17 ರಂದು ಘಟನೆ ನಡೆದಿದೆ ಎನ್ನಲಾಗಿದೆ. ಅಭಿಮಾನಿ ಚಂದ್ರಶೇಖರ್ ಎಂಬವರ ಮೇಲೆ ಧನ್ವೀರ್ ಮತ್ತು ಸ್ನೇಹಿತರು ಸೆಲ್ಫೀ ಕೇಳಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ನಿನ್ನೆ ಬೈ ಟು ಲವ್ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ಪ್ರಚಾರ ಕೆಲಸದಲ್ಲಿದ್ದಾಗ ಘಟನೆ ನಡೆದಿದೆ. ಚಂದ್ರಶೇಖರ್ ಮತ್ತು ಸ್ನೇಹಿತರು ಸೆಲ್ಫೀ ಕೇಳಲು ಹೋದಾಗ ಕನ್ನಡ ಬರಲ್ವಾ ಎಂದು ಬೈದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.