Publish Date: Wed, 23 Sep 2020 (12:11 IST)
Updated Date: Wed, 23 Sep 2020 (12:13 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಗಂತ್ ಮೊಬೈಲ್ ಡೇಟಾ ರಿಟ್ರೀವ್ ಮಾಡಿರುವ ಸಿಸಿಬಿ ಪೊಲೀಸರು ನಟನ ವಿಚಾರಣೆಗಾಗಿ ಮತ್ತೊಮ್ಮೆ ಕರೆದಿದ್ದಾರೆ. ಈ ಹಿನ್ನಲೆಯಲ್ಲಿ ದಿಗಂತ್ ಇಂದು 11.15 ರ ಸುಮಾರಿಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಹಾಜರಾಗಿದ್ದಾರೆ.
ಇಂದು ಮೊಬೈಲ್ ನಲ್ಲಿರುವ ಮಾಹಿತಿ ಅನ್ವಯ ಡ್ರಗ್ ಪೆಡ್ಲರ್ ಗಳ ಜತೆಗೆ ದಿಗಂತ್ ಗೆ ನಂಟಿದೆಯೇ ಎಂಬ ಕುರಿತಾಗಿ ಮತ್ತಷ್ಟು ಮಾಹಿತಿ ಕಲೆ ಹಾಕಲಿರುವ ಪೊಲೀಸರು ಅಗತ್ಯ ಬಂದರೆ ದಿಗಂತ್ ರನ್ನು ವಶಕ್ಕೆ ಪಡೆದರೂ ಅಚ್ಚರಿಯಿಲ್ಲ. ಶೂಟಿಂಗ್ ನಲ್ಲಿದ್ದ ದಿಗಂತ್ ಅಲ್ಲಿಂದಲೇ ನೇರವಾಗಿ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಆದರೆ ಇಂದು ಐಂದ್ರಿತಾಗೆ ವಿಚಾರಣೆಗೆ ಹಾಜರಾಗಲು ಪೊಲೀಸರು ಸೂಚಿಸಿರಲಿಲ್ಲ.