ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣ ಮತ್ತೆ ನಟ ದಿಗಂತ್ ಗೆ ಉರುಳಾಗುವ ಲಕ್ಷಣ ಕಾಣುತ್ತಿದೆ. ದಿಗಂತ್ ಮೊಬೈಲ್ ನಲ್ಲಿದ್ದ ಮಾಹಿತಿ ರಿಟ್ರೀವ್ ಮಾಡಿರುವ ಪೊಲೀಸರು ಇಂದು ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಸದ್ಯಕ್ಕೆ ಶೂಟಿಂಗ್ ನಲ್ಲಿರುವ ದಿಗಂತ್ ಇಂದು ಅಲ್ಲಿಂದಲೇ ನೇರವಾಗಿ ವಿಚಾರಣೆಗೆ ಹಾಜರಾಗಲಿದ್ದಾರೆ. ಮೊಬೈಲ್ ನಲ್ಲಿ ಹಲವು ಮಹತ್ವದ ಮಾಹಿತಿ ದೊರಕಿದೆ ಎನ್ನಲಾಗಿದೆ. ಹೀಗಾಗಿ ದಿಗಂತ್ ರನ್ನು ಇಂದು ಮತ್ತೆ ಪೊಲೀಸರು ಡ್ರಿಲ್ ಮಾಡಲಿದ್ದಾರೆ. ಕೆಲವೇ ಕ್ಷಣಗಳಲ್ಲಿ ದಿಗಂತ್ ಕಚೇರಿಗೆ ಆಗಮಿಸಲಿದ್ದಾರೆ.