ಬೆಂಗಳೂರು: ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ನಿನ್ನೆ ರಾಜ್ಯ ಆಂತರಿಕ ದಳ ಐಎಸ್ ಡಿ ಗಟ್ಟಿಮೇಳ ಧಾರವಾಹಿ ನಟ ಅಭಿಷೇಕ್ ದಾಸ್ ರನ್ನು ವಿಚಾರಣೆಗೊಳಪಡಿಸಿತ್ತು. ಈ ಬಗ್ಗೆ ಅಭಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನನ್ನನ್ನು ವಿಚಾಠಣೆಗೆ ಕರೆದ ಮಾತ್ರಕ್ಕೆ ಮಾಧ್ಯಮಗಳು ನಾನು ಅಪರಾಧಿ ಎಂದು ಬಿಂಬಿಸುತ್ತಿವೆ. ಆದರೆ ನಾನು ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಅಧಿಕಾರಿಗಳು ನನ್ನ ಬಳಿ ಕೆಲವು ಮಾಹಿತಿ ಪಡೆದಿದ್ದಾರಷ್ಟೇ. ಇದಕ್ಕೆ ನಾನು ಸಮರ್ಪಕ ಉತ್ತರ ಕೊಟ್ಟಿದ್ದೇನೆ. ಮುಂದಿನ ದಿನದಲ್ಲಿಯೂ ಐಎಸ್ ಡಿ ಅಧಿಕಾರಿಗಳು ನನ್ನನ್ನು ವಿಚಾರಣೆಗೆ ಕರೆದರೆ ತಪ್ಪದೇ ಹಾಜರಾಗುತ್ತೇನೆ ಎಂದು ಅಭಿಷೇಕ್ ಸ್ಪಷ್ಟಪಡಿಸಿದ್ದಾರೆ.