ಸಾಮಾನ್ಯವಾಗಿ ಬರುವ ಕರೆಂಟ್ ಬಿಲ್ ಗಿಂತ ಈ ಬಾರಿ ಬಂದ ವಿದ್ಯುತ್ ಬಿಲ್ ನೋಡಿ ಚಿತ್ರನಟಿಯೊಬ್ಬಳು ಹೌಹಾರಿದ್ದಾಳೆ.
ಬಾಲಿವುಟ್ ನಟಿ ತಾಪ್ಸಿ ಪನ್ನು, ತಮ್ಮ ಮನೆಯ ವಿದ್ಯುತ್ ಬಿಲ್ 835 % ಹೆಚ್ಚಾಗಿದೆ ಎಂದು ದೂರಿದ್ದಾಳೆ.
ಎಪ್ರಿಲ್ ನಲ್ಲಿ 4,390 ರೂ., ಮೇ ನಲ್ಲಿ 3,850 ರೂ.ಗಳಿದ್ದ ವಿದ್ಯುತ್ ಬಿಲ್ ಜೂನ್ ನಲ್ಲಿ 36,000 ರೂ.ಗಳಷ್ಟು ಬಂದಿದೆ.
ಮನೆಗೆ ಯಾವುದೇ ವಿದ್ಯುತ್ ನ ಹೊಸ ವಸ್ತುಗಳನ್ನು ತಂದಿರದಿದ್ದರೂ ಏಕಾಏಕಿಯಾಗಿ ಬೃಹತ್ ಪ್ರಮಾಣದಲ್ಲಿ ವಿದ್ಯುತ್ ಬಿಲ್ ಅವೈಜ್ಞಾನಿಕವಾಗಿ ಏರಿಕೆಯಾಗಿದೆ ಎಂದು ನಟಿ ದೂರಿದ್ದಾಳೆ.