Publish Date: Sun, 07 Jun 2020 (17:34 IST)
Updated Date: Sun, 07 Jun 2020 (17:35 IST)
ಬೆಂಗಳೂರು: ಬ್ರೈನ್ ಸ್ಟ್ರೋಕ್ ಮತ್ತು ಹೃದಯಾಘಾತದಿಂದಾಗಿ ಹಠಾತ್ ನಿಧನರಾದ ನಟ ಚಿರಂಜೀವಿ ಸರ್ಜಾ ನಿಧನಕ್ಕೆ ಸ್ಯಾಂಡಲ್ ವುಡ್ ಆಘಾತದ ಜತೆ ಕಂಬನಿ ಮಿಡಿದಿದೆ.
ನಟ ದರ್ಶನ್ ತೂಗುದೀಪ, ಶಿವರಾಜ ಕುಮಾರ್, ರಮೇಶ್ ಅರವಿಂದ್, ರಕ್ಷಿತಾ ಪ್ರೇಮ್, ಅನಿರುದ್ಧ್ , ರಿಷಬ್ ಶೆಟ್ಟಿ, ಜಗ್ಗೇಶ‍್ ಸೇರಿದಂತೆ ಹೆಚ್ಚಿನ ಕಲಾವಿದರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಚಿರು ಅಕಾಲಿಕ ನಿಧನದಿಂದ ಮನಸ್ಸಿಗೆ ಹೇಳಲಾಗದಷ್ಟು ಆಘಾತವಾಗಿದೆ ಎಂದು ದರ್ಶನ್ ಸಂತಾಪ ವ್ಯಕ್ತಪಡಿಸಿದರೆ, ಜಗ್ಗೇಶ್ ಇದು ತೀರಾ ಅನ್ಯಾಯ ಎಂದಿದ್ದಾರೆ. ರಮೇಶ್ ಅರವಿಂದ್, ರಕ್ಷಿತಾ ಪ್ರೇಮ್ ಈ ಸುದ್ದಿಯನ್ನು ಅರಗಿಸಿಕೊಳ್ಳಲೂ ಆಗುತ್ತಿಲ್ಲ. ಭಯವಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸ್ಯಾಂಡಲ್ ವುಡ್ ಗೆ ಮಾತ್ರವಲ್ಲ, ಅಭಿಮಾನಿಗಳಿಗೂ ಇದು ನಂಬಲಸಾಧ್ಯವಾದ ಸುದ್ದಿಯಾಗಿದೆ.