Publish Date: Sun, 07 Jun 2020 (17:12 IST)
Updated Date: Sun, 07 Jun 2020 (17:15 IST)
ಬೆಂಗಳೂರು: ಸ್ಯಾಂಡಲ್ ವುಡ್ ಗೆ ಬಿಗ್ ಶಾಕ್. ನಟ ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿದ್ದಾರೆ. ಬ್ರೈನ್ ಸ್ಟ್ರೋಕ್ ಮತ್ತು ಹೃದಯಾಘಾತದಿಂದಾಗಿ ಆಗಿ ಹಠಾತ್ ಆಗಿ ಇಹಲೋಕ ತ್ಯಜಿಸಿದ್ದಾರೆ.
ಮೂರು ದಿನದ ಹಿಂದೆ ಅವರಿಗೆ ಬ್ರೈನ್ ಸ್ಟ್ರೋಕ್ ಆಗಿತ್ತು ಎನ್ನಲಾಗಿದೆ. ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ. ಅವರಿಗೆ ಕೇವಲ 39 ವರ್ಷ ವಯಸ್ಸಾಗಿತ್ತು.
ಪತ್ನಿ, ನಟಿ ಮೇಘನಾ ರಾಜ್, ಸಹೋದರ ಧ್ರುವ ಸರ್ಜಾ, ಮಾವ ಅರ್ಜುನ್ ಸರ್ಜಾ ಸೇರಿದಂತೆ ಅಪಾರ ಬಂಧುವರ್ಗದವರನ್ನು ಅವರು ಅಗಲಿದ್ದಾರೆ.