Publish Date: Sat, 06 Jun 2020 (09:03 IST)
Updated Date: Sat, 06 Jun 2020 (09:05 IST)
ಬೆಂಗಳೂರು: ಲವ್ ಮಾಕ್ ಟೈಲ್ ಸಿನಿಮಾ ಮೂಲಕ ನಿರ್ದೇಶಕನಾಗಿಯೂ ಗೆದ್ದ ನಟ ಡಾರ್ಲಿಂಗ್ ಕೃಷ್ಣ ಈಗ ಎರಡನೇ ಭಾಗಕ್ಕೆ ಸಿದ್ಧತೆ ನಡೆಸಿದ್ದಾರೆ.
ಮೊದಲ ಭಾಗಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದ ಕೃಷ್ಣ ಲಾಕ್ ಡೌನ್ ಸಮಯದಲ್ಲಿ ಎರಡನೇ ಭಾಗಕ್ಕೆ ಸ್ಕ್ರಿಪ್ಟ್ ಬರೆಯುತ್ತಿದ್ದರು. ಅದೀಗ ಪೂರ್ಣವಾಗಿದೆ ಎಂಬ ವಿಚಾರವನ್ನು ಅವರು ಖುಷಿಯಿಂದಲೇ ಹೇಳಿಕೊಂಡಿದ್ದಾರೆ.
ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡುತ್ತಿದ್ದಂತೇ ಉಳಿದ ಕೆಲಸಗಳಲ್ಲಿ ಕೃಷ್ಣ ತೊಡಗಿಸಿಕೊಳ್ಳಲಿದ್ದಾರೆ. ಅಂದ ಹಾಗೆ ಎರಡನೇ ಭಾಗ ಮೊದಲನೇ ಭಾಗಕ್ಕಿಂತಲೂ ಚೆನ್ನಾಗಿ ಮೂಡಿಬರಲಿದೆ ಎಂದಿರುವ ಕೃಷ್ಣ ವೀಕ್ಷಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.