Select Your Language

Notifications

webdunia
webdunia
webdunia
webdunia

ಬಿಜೆಪಿ ಸೇರಿದ 'ಅನುಪಮಾ' ಸೀರಿಯಲ್ ಖ್ಯಾತಿಯ ನಟಿ ರೂಪಾಲಿ ಗಂಗೂಲಿ

Rupali

Sampriya

ನವದೆಹಲಿ , ಬುಧವಾರ, 1 ಮೇ 2024 (14:49 IST)
Photo Courtesy X
ನವದೆಹಲಿ:  ಅನುಪಮ ಸೀರಿಯಲ್ ಖ್ಯಾತಿಯ ಜನಪ್ರಿಯ ನಟಿ ರೂಪಾಲಿ ಗಂಗೂಲಿ ಅವರು ಇಂದು ಬಿಜೆಪಿಗೆ ಸೇರ್ಪಡೆಗೊಂಡರು.

ಇಂದು ನವದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ನಟಿನನ್ನು ಬಿಜೆಪಿಗೆ ಸ್ವಾಗತಿಸಲಾಯಿತು.

ನಂತರ ಮಾಧ್ಯಮದವರ ಜತೆ ಮಾತನಾಡಿದ ರೂಪಾಲಿ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿಯ 'ಮಹಾಯಜ್ಞ'ವನ್ನು ನೋಡಿದಾಗ ನನಗೂ ಇದರಲ್ಲಿ ಪಾಲ್ಗೊಳ್ಳಬೇಕೆನಿಸಿತು. ನನ್ನ ಈ ಹೊಸ ಪ್ರಯಾಣಕ್ಕೆ ನಿಮ್ಮ ಆಶೀರ್ವಾದ, ಬೆಂಬಲಬೇಕೆಂದರು.


ನಡೆಯುತ್ತಿರುವ ಏಳು ಹಂತಗಳ ಲೋಕಸಭಾ ಚುನಾವಣೆಯ ನಡುವೆ, ಈಗಾಗಲೇ ಮೊದಲ ಎರಡು ಹಂತಗಳಿಗೆ ಮತದಾನವನ್ನು ನಡೆದದಿದೆ

 ಸಿನಿಮಾ ನಿರ್ದೇಶಕ ಅನಿಲ್ ಗಂಗೂಲಿ ಅವರ ಪುತ್ರಿಯಾಗಿರುವ ರೂಪಾಲಿ ಅವರು ತಮ್ಮ 7ನೇ ವಯಸ್ಸಿನಲ್ಲಿ ವೃತ್ತಿ ಜೀವನವನ್ನು ಆರಂಭಿಸಿದರು. ಅವರು ತಮ್ಮ ತಂದೆಯ ಸಾಹೇಬ ಚಿತ್ರದಲ್ಲಿ ತಮ್ಮ ಮೊದಲ ಪಾತ್ರ ನಿರ್ವಹಿಸಿದರು. ಆದರೆ 2023ರಲ್ಲಿ ಬಂದ ಸಂಜೀವಿನಿ ಎ ಮೆಡಿಕಲ್ ಬೂನ್ ಧಾರಾವಾಹಿಯಿಂದ ರೂಪಾಳಿಗೆ ಮನ್ನಣೆ ಸಿಕ್ಕಿತ್ತು.

ನಟಿ ಬಿಗ್​ಬಾಸ್ ಸೀಸನ್​ 1ರಲ್ಲೂ ಭಾಗವಹಿಸಿದ್ದರು. ಸಾರಾಭಾಯ್ ವರ್ಸಸ್ ಸಾರಾಭಾಯ್ ನಂತಹ ಹಿಟ್​ ಶೋಗಳಲ್ಲೂ ಭಾಗವಹಿಸಿದ್ದರು. 2013ರಲ್ಲಿ ಪರ್ವರಿಶ್​ ಧಾರಾವಾಹಿ ಮಾಡಿದ ಬಳಿಕ 7 ವರ್ಷಗಳ ವಿರಾಮ ತೆಗೆದುಕೊಂಡಿದ್ದರು. ಬಳಿಕ ಅನುಪಮಾ ಮೂಲಕ ಕಿರುತೆರೆಗೆ ಬಂದರು. ಇದು ಇವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು

Share this Story:

Follow Webdunia kannada

ಮುಂದಿನ ಸುದ್ದಿ

ಸಲಾರ್ 2 ನಿಂತಿಲ್ಲ, ಶೂಟಿಂಗ್ ಆರಂಭ ಸಮಯ ಬಹಿರಂಗ




X
X
X
X