Select Your Language

Notifications

webdunia
webdunia
webdunia
webdunia

ಸಲಾರ್ 2 ನಿಂತಿಲ್ಲ, ಶೂಟಿಂಗ್ ಆರಂಭ ಸಮಯ ಬಹಿರಂಗ

Salaar

Krishnaveni K

ಹೈದರಾಬಾದ್ , ಬುಧವಾರ, 1 ಮೇ 2024 (14:45 IST)
ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದ ಎರಡನೇ ಭಾಗ ಮೂಡಿಬರುವುದು ಪಕ್ಕಾ ಆಗಿದೆ.

ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ನಡುವೆ ಭಿನ್ನಾಬಿಪ್ರಾಯಗಳಿರುವುದರಿಂದ ಸಲಾರ್ 2 ಶೌರ್ಯಾಂಗ ಪಾರ್ಟ್ ಬರಲ್ಲ ಎಂಬ ಸುದ್ದಿಗಳಿತ್ತು. ಆದರೆ ಇದೆಲ್ಲಾ ಸುಳ್ಳಾಗಿದೆ. ಸಲಾರ್ 2 ಬರುವುದು ಕನ್ ಫರ್ಮ್ ಆಗಿದೆ. ಯಾವಾಗ ಶುರುವಾಗಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಸಲಾರ್ 2 ಸಿನಿಮಾ ಜೂನ್ ನಲ್ಲಿ ಶೂಟಿಂಗ್ ಆರಂಭವಾಗಲಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಮೊದಲ ಭಾಗದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಕೂಡಾ ಪ್ರಮುಖ ಪಾತ್ರ ಮಾಡಿದ್ದರು. ಇದೀಗ ಈ ಇಬ್ಬರ ದೋಸ್ತಿ ಬಗ್ಗೆಯೇ ಮತ್ತೊಂದು ಕತೆ ಎರಡನೇ ಭಾಗದಲ್ಲಿರಲಿದೆ.

ಇದೀಗ ಪ್ರಭಾಸ್ ಸಲಾರ್ 2 ನೇ ಭಾಗದಲ್ಲಿ ನಟಿಸಲು ಹಸಿರುನಿಶಾನೆ ತೋರಿದ್ದಾರಂತೆ.  ಜೂನ್ ಮಧ‍್ಯಭಾಗದಲ್ಲಿ ಸಲಾರ್ 2  ಶುರುವಾಗಲಿದೆ. ಹೊಂಬಾಳೆ ಫಿಲಂಸ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಪ್ರಶಾಂತ್ ನೀಲ್ ಈಗ ಸ್ಕ್ರಿಪ್ಟ್ ಕೆಲಸಗಳನ್ನು ಬಹುತೇಕ ಮುಗಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್




X
X
X
X