ಬೆಳಗಾವಿ: ಲೋಕಸಭೆ ಚುನಾವಣೆ ಹಿನ್ನೆಲೆ ಬೆಳಗಾವಿಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸ್ನೇಹಿತನಿಂದಲೇ ಹತ್ಯೆಗೀಡಾದ ನೇಹಾ ಹಿರೇಮಠ್ ಪ್ರಕರಣದಲ್ಲಿ ಕಾಂಗ್ರೆಸ್ ಅನ್ಯಾಯ ಎಸಗಿದೆ ಎಂದು ಗುಡುಗಿದರು.
ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಬೆಳಗಾವಿಯಲ್ಲಿ ಆದಿವಾಸಿ ಸಹೋದರಿ ಜೊತೆ ಅನ್ಯಾಯ ಆಗಿದೆ. ಚಿಕ್ಕೋಡಿಯ ಘಟನೆ ನಾಚಿಕೆಪಡುವಂಥಾ ಕೃತ್ಯವಾಗಿದೆ. ಅದಲ್ಲದೆ ಸ್ನೇಹಿತನಿಂದಲೇ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯನ್ನು ಹತ್ಯೆಯಾಗಿದ್ದು, ಇವೆಲ್ಲ ಕರ್ನಾಟಕದ ಪ್ರತಿಷ್ಠೆಯನ್ನು ಮಣ್ಣು ಪಾಲಾಗಿಸುವ ಘಟನೆ ಎಂದರು.
ಇನ್ನೂ ಹತ್ಯೆಗೀಡಾದ ಣೇಹಾ ಪ್ರಕರಣದ ಆಕೆ ಪೋಷಕರು ನ್ಯಾಯ ಕೇಳಿದ್ರೆ ಆದರೆ ಕಾಂಗ್ರೆಸ್ ತುಷ್ಟೀಕರಣಕ್ಕೆ ಮುಂದಾಗಿದೆ. ಕಾಂಗ್ರೆಸ್‌ಗೆ ಕಾನೂನು ವಿಚಾರದಲ್ಲಿ ಗಂಭೀರತೆ ಇಲ್ಲ. ಬೆಂಗಳೂರಿನ ರಾಮೇಶ್ವರ ಬಾಂಬ್ ಬ್ಲಾಸ್ಟ್ ಅನ್ನು ಸಿಲಿಂಡರ್ ಸ್ಪೋಟ ಎಂದು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದರು. ಕಾಂಗ್ರೆಸ್‌ನವರಿಗೆ ರಾಜ್ಯದಲ್ಲಿ ಕಾನೂನು ಕಾಪಾಡಲು ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಗುಡುಗಿದರು.
ಶಿವಾಜಿ, ಚೆನ್ನಮ್ಮ ದೇಶಭಕ್ತಿ ಇಂದಿಗೂ ಪ್ರೇರಕವಾಗಿದೆ. ಮೈಸೂರು ರಾಜಮನೆತನವನ್ನ ದೇಶ ಹೆಮ್ಮೆಯಿಂದ ನೋಡುತ್ತದೆ ಯುವರಾಜನ ಹೇಳಿಕೆ ವೋಟ್ ಬ್ಯಾಂಕ್ ರಾಜಕಾರಣವಾಗಿದೆ. ನವಾಬರು, ನಿಜಾಮರು, ಸುಲ್ತಾನರ ಅತ್ಯಾಚಾರದ ಬಗ್ಗೆ ಮಾತನಾಡಲ್ಲ. ಕಾಂಗ್ರೆಸ್‌ಗೆ ಔರಂಜೇಬನ ಅತ್ಯಾಚಾರ ನೆನಪಾಗಲ್ಲ. ವೋಟ್ ಬ್ಯಾಂಕ್‌ಗೆ ರಾಜರ ವಿರುದ್ಧ ಮಾತನಾಡ್ತಾರೆ ಎಂದು ಗುಡುಗಿದರು.
ನವಾಬರು, ಸುಲ್ತಾನರ ವಿರುದ್ಧ ಮಾತನಾಡಲ್ಲ. ಕಾಂಗ್ರೆಸ್‌ನದ್ದು ತುಷ್ಟೀಕರಣದ ಮಾನಸಿಕತೆ. ಕಾಂಗ್ರೆಸ್ ಮಾನಸಿಕತೆ ದೇಶದ ಎದುರು ಬಹಿರಂಗವಾಗಿದೆ. ಕಾಂಗ್ರೆಸ್ ಮಾನಸಿಕತೆ ಪ್ರಣಾಳಿಕೆಯಲ್ಲೂ ಕಂಡು ಬಂದಿದೆ ಎಂದು ಕಿಡಿಕಾರಿದರು.