ಚೆನ್ನೈ : ಏಜೆಂಟ್ ಸಾಯಿ ಶ್ರೀನಿವಾಸ್ ಅತ್ರೇಯ ಇತ್ತೀಚೆಗೆ ಬಿಡುಗಡೆಯಾದ ಸೂಪರ್ ಹಿಟ್ ತೆಲುಗು ಚಿತ್ರ. ಆರ್ ಎಸ್ ಜೇ ಸ್ವರೂಪ್ ನಿರ್ದೇಶಿಸಿದ ಈ ಚಿತ್ರ ಡಿಟೆಕ್ಟಿವ್ ಥ್ರಿಲ್ಲರ್ ಚಿತ್ರವಾಗಿದೆ. ಇದೀಗ ಈ ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ.
ತೆಲುಗು ಆವೃತ್ತಿಯಲ್ಲಿ ನವೀನ್ ಪಾಲಿಸೆಟ್ಟಿ ಡಿಟೆಕ್ಟಿವ್ ಆತ್ರೇಯಾ ಪಾತ್ರ ವಹಿಸಿದ್ದರು. ಇದೀಗ ತಮಿಳಿನಲ್ಲಿ ರಿಮೇಕ್ ಆಗುತ್ತಿರುವ ಈ ಚಿತ್ರದಲ್ಲಿ ಬಿಸ್ಕೋಟಿ ಚಿತ್ರದ ನಟ ಸಂತಾನಂ ನಟಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಈ ಚಿತ್ರವನ್ನು ವಂಜಗರ್ ಉಲಗಂ ಖ್ಯಾತಿಯ ಮನೀಜ್ ಬೇಡಾ ನಿರ್ದೇಶಿಸಲಿದ್ದಾರೆ. ರಿಯಾ ಸುಮನ್ ಈ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.ಈ ಚಿತ್ರದ ಶೂಟಿಂಗ್ ಶೀಘ್ರದಲ್ಲಿಯೇ ಸೆಟ್ಟೇರಲಿದೆ.