ಚೆನ್ನೈ : ನಟ ವಿಜಯ್ ಅಭಿನಯದ ಸೂಪರ್ ಹಿಟ್ ಚಿತ್ರ ಮಾಸ್ಟರ್ ಜನವರಿ 13ರಂದು ಬಿಡುಗಡೆಯಾಗಿ, ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಈ ಚಿತ್ರ ಬ್ಲಾಕ್ಬಸ್ಟರ್ ಆಗಿ ವಿಶ್ವದಾದ್ಯಂತ ಸುಮಾರು 225 ಕೋಟಿಗಳನ್ನು ಸಂಗ್ರಹಿಸಿದೆ.
ಆದರೆ ಇದೀಗ ಈ ಚಿತ್ರ ಚಿತ್ರಮಂದಿರದಲ್ಲಿರುವಾಗಲೇ ಒಟಿಟಿ ಸೈಟ್ ನಲ್ಲಿ ಮಾಸ್ಟರ್ ಚಿತ್ರವನ್ನುಜ.28ರಂದು ಬಿಡುಗಡೆ ಮಾಡಲಾಗಿದೆ. ಇದರಿಂದ ಪ್ರದರ್ಶಕರ ಸಂಗ್ರಹದಲ್ಲಿ ನಷ್ಟವಾಗುವ ಕಾರಣದಿಂದ ಅದನ್ನು ಸರಿದೂಗಿಸಲು ಅವರು ನಿರ್ಮಾಪರೊಂದಿಗೆ ಸಭೆ ನಡೆಸಿ ಒಟಿಟಿ ಲಾಭದ ಶೇ.10ರಷ್ಟು ತಮಗೆ ನೀಡುವಂತೆ ಕೇಳಿದ್ದಾರೆ.
ಆದರೆ ನಿರ್ಮಾಪಕರು ಚಿತ್ರದ 17ನೇ ದಿನದಿಂದ ಲಾಭದ ಸಂಪೂರ್ಣ ಪಾಲನ್ನು ತೆಗೆದುಕೊಳ್ಳುವಂತೆ ಪ್ರದರ್ಶಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.