ಚೆನ್ನೈ : ನಟ ಅಖಿಲ್ ಅಕ್ಕಿನೇನಿ ಅವರ ಮೂರು ಚಿತ್ರಗಳು ಪ್ಲಾಫ್ ಆಗಿತ್ತು. ಇದೀಗ 4ನೇ ಚಿತ್ರದಲ್ಲಿ ಯಶಸ್ಸು ಕಾಣಲು ತುಂಬಾ ಶ್ರಮಿಸುತ್ತಿದ್ದಾರೆ. ಪ್ರಸ್ತುತ ಭಾಸ್ಕರ್ ಅವರೊಂದಿಗೆ ಸೇರಿ ಮೋಸ್ಟ್ ಎಲಿಜೇಬಲ್ ಬ್ಯಾಚುಲರ್ ಚಿತ್ರವನ್ನು ಮಾಡುತ್ತಿದ್ದಾರೆ.
ಆದರೆ ಈ ಚಿತ್ರದ ನಂತರ ಪ್ರಾರಂಭವಾದ ಚಿತ್ರಗಳ ಬಿಡುಗಡೆಯ ದಿನಾಂಕದ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿದ್ದಾರೆ. ಆದರೆ ಮೋಸ್ಟ್ ಎಲಿಜೇಬಲ್ ಬ್ಯಾಚುಲರ್ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಸಿಗದ ಹಿನ್ನಲೆಯಲ್ಲಿ ಪ್ರೇಕ್ಷಕರಿಂದ ಟೀಕೆಗಳು ಕೇಳಿಬರುತ್ತಿದೆ. ಆದರೆ ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.