Webdunia - Bharat's app for daily news and videos

Install App

ಕುಡಿಯೋದು ಕಲಿತೆ: ಜೀವನದ ದೊಡ್ಡ ಸೀಕ್ರೆಟ್ ಬಯಲು ಮಾಡಿದ ನಟಿ ಉಮಾಶ್ರೀ

Krishnaveni K
ಸೋಮವಾರ, 18 ನವೆಂಬರ್ 2024 (11:50 IST)
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಹಿರಿಯ ನಟಿ ಉಮಾಶ್ರೀ ತಮ್ಮ ಜೀವನದ ಬಹುದೊಡ್ಡ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಉಮಾಶ್ರೀ ತಮ್ಮ ಜೀವನ ಕಡು ಕಷ್ಟದ ದಿನಗಳನ್ನು ನೆನೆಸಿಕೊಂಡಿದ್ದಾರೆ. ‘ನನಗೆ ಚಿಕ್ಕಂದಿನಿಂದಲೇ ನಾಟಕ, ಸಿನಿಮಾದ ಅಭಿರುಚಿಯಿತ್ತು. ರಂಗಭೂಮಿ ನನಗೆ ಹೊಸ ಬದುಕು ನೀಡಿತು. 1978 ರಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದೆ. 1975 ರಲ್ಲಿ ಚಿಕ್ಕ ವಯಸ್ಸಿನಲ್ಲೇ ಮದುವೆಯಾಯಿತು. ಆ ಬಳಿಕ ಕೌಟುಂಬಿಕವಾಗಿ ಹಲವು ಸಂಘರ್ಷಗಳನ್ನು ಎದುರಿಸಿದೆ’ ಎಂದು ಉಮಾಶ್ರೀ ಹೇಳಿದ್ದಾರೆ.

‘ಕೂಲಿ ನಾಲಿ ಮಾಡಿ ಬುಟ್ಟಿ ಹೆಣೆದು ಜೀವನ ನಡೆಸುತ್ತಿದ್ದೆ. ಆಗ ನನಗೆ ರಂಗ ಸಂಪದದಲ್ಲಿ ಹವ್ಯಾಸಿ ಕಲಾವಿದೆಯಾಗಿ ಅವಕಾಶ ಸಿಕ್ಕಿತ್ತು. ಅಲ್ಲಿ ಸಿಗುತ್ತಿದ್ದ 50 ರೂ. ನನ್ನ ಬದುಕಿಗೆ ಅಲ್ಪ ನೆರವು ನೀಡಿತ್ತು. ಬಳಿಕ ಹಲವು ನಾಟಕಗಳಲ್ಲಿ ಅವಕಾಶ ಸಿಕ್ಕಿತು. ಉಮಾದೇವಿಯಾಗಿದ್ದ ನಾನು ಉಮಾಶ್ರೀಯಾಗಿ ಬದುಕು ಕಟ್ಟಿಕೊಂಡೆ’ ಎಂದಿದ್ದಾರೆ.

ವೈಯಕ್ತಿಕ ಜೀವನದಲ್ಲಿ ಉಮಾಶ್ರೀ ಸಾಕಷ್ಟು ಕಷ್ಟಗಳನ್ನು ಕಂಡವರು. ಈ ಸಂದರ್ಭದಲ್ಲಿ ಅವರು ಹಲವು ಬಾರಿ ಸಾಯಲೂ ನಿರ್ಧರಿಸಿದ್ದರಂತೆ. ಆದರೆ ಮಕ್ಕಳಿಗಾಗಿ ಬದುಕಬೇಕು ಎಂದುಕೊಂಡರಂತೆ. ಒಂಟಿತನವನ್ನು ಜಯಿಸಲು ಕಲಿತೆ. ಬದುಕಿನಲ್ಲಿ ನೊಂದಿದ್ದ ನಾನು ಮದ್ಯ ಸೇವನೆ ಮಾಡುವುದನ್ನು ಕಲಿತೆ. ಆದರೆ ಈಗ ಅದನ್ನು ಬಿಟ್ಟಿದ್ದೇನೆ’ ಎಂದು ಉಮಾಶ್ರೀ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

Darshan Thoogudeepa video: ಪತ್ನಿಯನ್ನು ತಬ್ಬಿಕೊಂಡು ಮುದ್ದು ರಾಕ್ಷಸಿ ಎಂದು ದರ್ಶನ್ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

ಮುಂದಿನ ಸುದ್ದಿ
Show comments