Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತುತ್ತಾಮುತ್ತಾ, ಜಾಣ ಚಿತ್ರದಲ್ಲಿ ನಟಿಸಿದ್ದ ನಟಿ ಕಸ್ತೂರಿ ಶಂಕರ್‌ ಬಂಧನ; ಕಾರಣ ಏನು ಗೊತ್ತಾ

Actress Kasturi Shankar

Sampriya

, ಭಾನುವಾರ, 17 ನವೆಂಬರ್ 2024 (10:25 IST)
Photo Courtesy X
ಚೆನ್ನೈ: ತಮಿಳುನಾಡಿನಲ್ಲಿ ತೆಲುಗು ಮಾತನಾಡುವವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ನಟಿ ಕಸ್ತೂರಿ ಶಂಕರ್‌  ಅವರನ್ನ ಹೈದರಾಬಾದ್‌ ಪೊಲೀಸರು ಶನಿವಾರ ಚೆನ್ನೈನಲ್ಲಿ ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಚೆನ್ನೈ ಸೇರಿದಂತೆ ತಮಿಳುನಾಡಿನ ಕೆಲವು ಕಡೆ ನಟಿ ಕಸ್ತೂರಿ ಶಂಕರ್ ವಿರುದ್ಧ ದೂರು ದಾಖಲಾಗಿತ್ತು. ಅದರ ಬೆನ್ನಲ್ಲೇ ನಟಿ ಕಸ್ತೂರಿ ಶಂಕರ್ ರಾಜ್ಯ ಬಿಟ್ಟು ಪರಾರಿಯಾಗಿದ್ದರು. ಅದರ ಜೊತೆಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರಾದರೂ ಸಹ ನ್ಯಾಯಾಲಯವು ಅರ್ಜಿ ನಿರಾಕರಿಸಿದ ಬೆನ್ನಲ್ಲೇ ಇದೀಗ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ.  

ನವೆಂಬರ್‌ 3ರಂದು ʻಹಿಂದೂ ಮಕ್ಕಳ್‌ ಕಚ್ಚಿʼಯ ಸಭೆಯಲ್ಲಿ ನಟಿಯ ಹೇಳಿಕೆ ಕುರಿತು ತಮಿಳುನಾಡಿನ ಬಿಜೆಪಿ ರಾಷ್ಟ್ರೀಯ ಸಹ ಉಸ್ತುವಾರಿ ಡಾ.ಪೊಂಗುಲೇಟಿ ಸುಧಾಕರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದರು. ಆ ನಂತರ ನವೆಂಬರ್‌ 6ರಂದು ನನ್ನ ಹೇಳಿಕೆ ಹಿಂಪಡೆಯುತ್ತೇನೆ ಎಂದು ನಟಿ ಘೋಷಣೆ ಮಾಡಿದ್ದರು.  

ಕೆಲವು ದಿನಗಳ ಹಿಂದಷ್ಟೇ ಅವರು ತೆಲುಗು ಭಾಷೆ ಮತ್ತು ತೆಲುಗು ಜನರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕಸ್ತೂರಿ ಶಂಕರ್‌ ಈ ಮಾತುಗಳು ವೈರಲ್‌ ಆಗುತ್ತಿದ್ದಂತೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ತೆಲುಗು ಮಾತನಾಡುವ ದ್ರಾವಿಡವಾದಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ಅಖಿಲ ಭಾರತ ತೆಲುಗು ಒಕ್ಕೂಟ ನಟಿ ಕಸ್ತೂರಿ ಶಂಕರ್‌ ವಿರುದ್ಧ ಚೆನೈನ ಎಗ್ಮೋರ್‌ ಪೊಲೀಸ್‌ ಠಾಣೆ ಸೇರಿ ಮಧುರೈನಲ್ಲಿಯೂ ದೂರು ದಾಖಲಿಸಲಾಗಿತ್ತು.

ಕಸ್ತೂರಿ ಅವರು ಕನ್ನಡ, ತೆಲುಗು, ತಮಿಳು ಸೇರಿ ಅನೇಕ ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಈ ಬ್ಯೂಟಿ ರವಿಚಂದ್ರನ್‌ ಜೊತೆ ಜಾಣ, ರಮೇಶ್‌ ಜೊತೆ ತುತ್ತಾ ಮುತ್ತಾ ಸೇರಿದಂತೆ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಿಂದ ದೂರಾದ ನಂತರವೂ ಕಸ್ತೂರಿ ಶಂಕರ್‌ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸದ್ದಿಲ್ಲದೆ ಹಸೆಮಣೆ ಏರಲು ಸಜ್ಜದ್ರಾ ಪಡ್ಡೆ ಹುಡುಗರ ಹೃದಯ ಕದ್ದ ಚೆಲುವೆ ಕೀರ್ತಿ ಸುರೇಶ್‌