Publish Date: Fri, 21 Aug 2020 (07:13 IST)
Updated Date: Fri, 21 Aug 2020 (07:16 IST)
ಹೈದರಾಬಾದ್ : ತೆಲುಗಿನ ಖ್ಯಾತ ನಟ ಶ್ರೀಹರಿ ತಮ್ಮ 49 ವಯಸ್ಸಿನಲ್ಲಿ ಮರಣ ಹೊಂದಿದ್ದು, ಇದೀಗ ಅವರ ಬಯೋಪಿಕ್ ಸಿನಿಮಾ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂಬು ಸುದ್ದಿ ಹರಿದಾಡುತ್ತಿದೆ.
ಹೌದು. ನಟ ಶ್ರೀಹರಿ ತೆಲುಗಿನಲ್ಲಿ ಮಾತ್ರವಲ್ಲ ಕನ್ನಡ, ತಮಿಳು ಸಿನಿಮಾರಂಗದಲ್ಲಿ ಮಿಂಚಿದವರು. ಆದರೆ ಅವರು ಲಿವರ್ ಸಮಸ್ಯೆಯಿಂದ ತಮ್ಮ 49 ವಯಸ್ಸಿನಲ್ಲಿ ಮರಣ ಹೊಂದಿದ್ದರು. ಇದೀಗ ಅವರ ಪತ್ನಿ ಶಾಂತ ಕುಮಾರಿ ಶ್ರೀಹರಿ ಜೀವನ ಕಥೆಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ. ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ನಟ ಶ್ರೀಹರಿ ಮಗ ಮೇಘಶ್ಯಾಂ ನಾಯಕ ನಟನಾಗಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ.