ಹೈದರಾಬಾದ್ : ಸೆಲೆಬ್ರಿಟಿ ಗಳು ಏನೇ ಮಾಡಿದರೂ, ಏನೇ ಧರಿಸಿದರೂ ಅದು ದೊಡ್ಡ ಸುದ್ದಿಯಾಗುತ್ತಿದೆ. ಅದೇರೀತಿ ಇದೀಗ ನಟಿ ಸಮಂತಾ ಅಕ್ಕಿನೇನಿ ಉಟ್ಟ ಸೀರೆಯೊಂದು ಇದೀಗ ಭಾರೀ ಸುದ್ದಿಯಾಗುತ್ತಿದೆ.
ಹೌದು. ನಟ ರಾಣಾ ದಗ್ಗುಬಾಟಿ ಇತ್ತಿಚೆಗೆ ಮದುವೆಯಾಗಿದ್ದರು. ಈ ಮದುವೆ ಸಮಾರಂಭಕ್ಕೆ ನಟಿ ಸಮಂತಾ ಅಕ್ಕಿನೇನಿ ಕೂಡ ಭಾಗಿಯಾಗಿದ್ದರು. ಆ ವೇಳೆ ಅವರು ನೀಲಿ ಬಣ್ಣಸ ಸಿಂಪಲ್ ಸೀರೆಯೊಂದನ್ನು ಧರಿಸಿದ್ದರು. ಈ ಸೀರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ.
ಅಷ್ಟಕ್ಕೂ ರಾಣಾ ಮದುವೆಯಂದು ಸಮಂತಾ ಧರಿಸಿದ ಸೀರೆ ನೋಡಲು ಸಿಂಪಲ್ ಆಗಿದ್ದರೂ ಅದರ ಬೆಲೆ ಕಡಿಮೆ ಇಲ್ಲ. ಈ ಸೀರೆಯ ಬೆಲೆ ಬರೋಬರಿ 75ಸಾವಿರ ರೂಪಾಯಿ ಎಂಬ ಮಾತು ಕೇಳಿಬಂದಿದೆ. ಈ ಸೀರೆ ಬಗ್ಗೆ ಹಲವರು ಕಾಮೆಂಟ್ ಮಾಡುತ್ತಿದ್ದಾರೆ.