ಹೈದರಾಬಾದ್ : ತೆಲುಗಿನ ಸಿನಿಮಾವೊಂದು ಬಿಡುಗಡೆಗೂ ಮುನ್ನವೇ ಕೇವಲ ಒಂದೇ ಒಂದು ಹಾಡಿನ ಮೂಲಕವೇ ಕೋಟ್ಯಾಂತರ ಹಣವನ್ನು ಸಂಪಾದಿಸಿ ಹೊಸ ದಾಖಲೆ ಸೃಷ್ಟಿಸಿದೆ.
ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರದೀಪ್ ಮಚ್ಚಿರಾಜು ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ ’30 ರೋಜುಲೋ ಪ್ರೇಮಿಂಚಡಂ ಎಲಾ’ ಸಿನಿಮಾದ ‘ನೀಲಿ ನೀಲಿ ಆಕಾಶಂ’ ಹಾಡು ಯೂಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗಿದ್ದು, 16.5ಕೋಟಿ ಬಾರಿ ವೀಕ್ಷಣೆ ಮಾಡಲಾಗಿದೆ. ಆ ಮೂಲಕ ಬಂದ ಆದಾಯ 70ಲಕ್ಷಕ್ಕೂ ಹೆಚ್ಚು.
ಅಷ್ಟೇ ಅಲ್ಲದೇ ಈ ಹಾಡನ್ನು ಹಲವು ಸಂಗೀತ ಆ್ಯಪ್ ಗಳಿಗೆ, ಇತರೆ ಫ್ಲ್ಯಾಟ್ ಫಾರ್ಮ್ ಗಳಿಗೆ ಮಾರಾಟ ಮಾಡಲಾಗಿದ್ದು, ಅದರಲ್ಲೂ ದೊಡ್ಡ ಮೊತ್ತದ ಹಣವನ್ನು ಪಡೆದಿದೆ. ಆ ಮೂಲಕ ಸಿನಿಮಾ ಬಿಟುಗಡೆಗೂ ಮುನ್ನ ಕೋಟ್ಯಾಂತರ ಹಣ ಸಂಪಾದಿಸಿ ದಾಖಲೆ ಸೃಷ್ಟಿಸಿದೆ ಎನ್ನಲಾಗಿದೆ.