Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಟ ಸಿಬಿರಾಜ್ ಹೆಸರಿನಲ್ಲಿ ನಕಲಿ ಪೋಸ್ಟ್ ಮಾಡಿ ಯುವತಿಯರಿಗೆ ಮೋಸ; ಈ ಬಗ್ಗೆ ನಟ ಹೇಳಿದ್ದೇನು?

ನಟ ಸಿಬಿರಾಜ್ ಹೆಸರಿನಲ್ಲಿ ನಕಲಿ ಪೋಸ್ಟ್ ಮಾಡಿ ಯುವತಿಯರಿಗೆ ಮೋಸ; ಈ ಬಗ್ಗೆ ನಟ ಹೇಳಿದ್ದೇನು?
ಹೈದರಾಬಾದ್ , ಸೋಮವಾರ, 26 ಏಪ್ರಿಲ್ 2021 (13:19 IST)
ಹೈದರಾಬಾದ್ : ನಟ ಸಿಬಿರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಪೋಸ್ಟ್ ಮಾಡಿ ವಂಚಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದನ್ನು ನಟ ನಿರಾಕರಿಸಿದ್ದಾರೆ.

ಕೆಲವು ದುಷ್ಕರ್ಮಿಗಳು ಯುವತಿಯರನ್ನು ಆಮಿಷಯೊಡ್ಡಲು ಸೋಶಿಯಲ್ ಮೀಡಿಯಾವನ್ನು ಬಳಸುತ್ತಿದ್ದಾರೆ. ಅದೇರೀತಿ ನಟ ಸಿಬಿರಾಜ್ ಅವರ ಹೆಸರಿನಲ್ಲಿ ಪೋಸ್ಟ್ ಮಾಡಿ ನಟಿಸುವ ಆಸೆ ಇರುವವರಿಂದ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಇದನ್ನು ಗಮನಿಸಿದ ನಟ ನಕಲಿ ಪೋಸ್ಟ್ ನ್ನು ಹಂಚಿಕೊಂಡು ಇದು ನಕಲಿ ಎಂದು ಸ್ಪಷ್ಟಪಡಿಸಿ ಈ ಹಗರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ. ಇದಕ್ಕೆ ಯಾರು ಬಲಿಪಶುವಾಗಬೇಡಿ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ದಿನವನ್ನು ತೆಲುಗಿನ ಹೆಮ್ಮೆ ದಿನವೆಂದ ಮೆಗಾಸ್ಟಾರ್ ಚಿರಂಜೀವಿ