Publish Date: Fri, 06 Mar 2020 (12:29 IST)
Updated Date: Fri, 06 Mar 2020 (12:31 IST)
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ಖ್ಯಾತಿಯ ನಟ ಅನಿರುದ್ಧ್ ಪ್ರಧಾನಿ ಮೋದಿಗೆ ಈಮೇಲ್ ಮುಖೇನ ಮನವಿ ಪತ್ರವೊಂದನ್ನು ರವಾನಿಸಿದ್ದಾರೆ.
ಎಲ್ಲರಿಗೂ ಗೊತ್ತಿರುವ ಹಾಗೆ ಅನಿರುದ್ಧ್ ನಟನಾಗಿ ಮಾತ್ರವಲ್ಲದೆ, ಬಿಡುವಿದ್ದಾಗಲೆಲ್ಲಾ ಪತ್ರಿಕೆಗಳಿಗೆ ಕಾಲಂ ಬರೆಯುತ್ತಿರುತ್ತಾರೆ. ಸಿನಿಮಾ ಹೊರತಾಗಿಯೂ ಕೆಲವು ಗಂಭೀರ ವಿಚಾರಗಳ ಬಗ್ಗೆ ಅನಿರುದ್ಧ್ ಬರೆಯುತ್ತಾರೆ. ಇತ್ತೀಚೆಗೆ ಅವರು ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಆಝಾದ್ ಹಿಂದ್ ಪೌಜ್ ನಲ್ಲಿ ಸೇವೆ ಸಲ್ಲಿಸಿದ್ದ ವ್ಯಕ್ತಿಯೊಬ್ಬರ ಬಗ್ಗೆ ಬರೆದುಕೊಂಡಿದ್ದರು.
ನೇತಾಜಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಪಾಂಡಿಯರಾಜ್ ಎಂಬ ವ್ಯಕ್ತಿ ಈಗಲೂ ತಮಿಳುನಾಡಿನಲ್ಲಿದ್ದು, ಆತನಿಗೆ ಉಳಿದುಕೊಳ‍್ಳಲು ಸೂರಿಲ್ಲದೇ, ಊಟಕ್ಕೂ ಪರದಾಡುತ್ತಿರುವ ಸ್ಥಿತಿ ಬಗ್ಗೆ ಬರೆದುಕೊಂಡಿದ್ದರು.
ಅದೇ ವಿಚಾರವಾಗಿ ಆತನಿಗೆ ಸೂರು ಕಲ್ಪಿಸಿಕೊಡುವಂತೆ ಮನವಿ ಮಾಡಿ ಅನಿರುದ್ಧ್ ನೇರವಾಗಿ ಪ್ರಧಾನಿ ಮೋದಿಗೆ ಈಮೇಲ್ ರವಾನಿಸಿದ್ದಾರೆ. ಇದಕ್ಕೆ ಪ್ರಧಾನಿ ಮೋದಿಯಿಂದ ಸ್ಪಂದನೆ ಸಿಗಬಹುದು ಎಂಬ ಆಶಯ ಅವರದ್ದು.