Publish Date: Fri, 06 Mar 2020 (09:34 IST)
Updated Date: Fri, 06 Mar 2020 (09:36 IST)
ಹೊನ್ನಾಳಿ: ಇಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಕೃಷಿಮೇಳಕ್ಕೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಬಾಬಾ ರಾಮ್ ದೇವ್ ಜತೆ ಯೋಗ ಮಾಡಿ ಗಮನಸೆಳೆದರು.
ಹೊನ್ನಾಳಿಯಲ್ಲಿ ನಡೆದ ಕೃಷಿ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಬಾ ರಾಮ್ ದೇವ್ ಜತೆ ವೇದಿಕೆ ಹಂಚಿಕೊಂಡ ಶಿವಣ್ಣ ವಿವಿಧ ಯೋಗ ಭಂಗಿಗಳನ್ನು ಮಾಡಿ ಗಮನ ಸೆಳೆದರು.
ಎಲ್ಲಕ್ಕಿಂತ ಹೆಚ್ಚು ಬಾಬಾ ರಾಮ್ ದೇವ್ ಎದುರು ವೇದಿಕೆಯಲ್ಲಿ ತಮಗಾಗಿ ಮೀಸಲಿರಿಸಿದ್ದ ಆಸನದ ಬದಲು ಕೆಳಗೆ ಕುಳಿತಿದ್ದ ಶಿವಣ್ಣ ಸರಳತೆಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.