Publish Date: Fri, 06 Mar 2020 (09:50 IST)
Updated Date: Fri, 06 Mar 2020 (09:52 IST)
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಕಿಂಗ್ ಸ್ಟಾರ್ ಯಶ್ ನಮ್ಮ ರಾಜ್ಯದಲ್ಲೇ ಒಂದು ಸುಸಜ್ಜಿತ ಸ್ಟುಡಿಯೋ ಕಟ್ಟಿಸಿಕೊಡಿ. ಇದರಿಂದ ನಾವು ಬೇರೆ ರಾಜ್ಯಕ್ಕೆ ಹೋಗಿ ಶೂಟಿಂಗ್ ಮಾಡುವುದು ತಪ್ಪುತ್ತೆ. ಅದರ ಎರಡರಷ್ಟು ದುಡ್ಡು ತೆರಿಗೆ ರೂಪದಲ್ಲಿ ಕೊಡ್ತೀವಿ ಎಂದಿದ್ದರು.
ಯಶ್ ವೇದಿಕೆಯಲ್ಲಿ ಮಾಡಿದ್ದ ಮನವಿಗೆ ಸಿಎಂ ಯಡಿಯೂರಪ್ಪ ಬಜೆಟ್ ನಲ್ಲಿ ಉತ್ತರ ಕೊಟ್ಟಿದ್ದಾರೆ. ನಿನ್ನೆ ಮಂಡಿಸಿದ ಬಜೆಟ್ ನಲ್ಲಿ ಬೆಂಗಳೂರಿನಲ್ಲೇ ಸ್ಟುಡಿಯೋ ಸ್ಥಾಪಿಸಲು 500 ಕೋಟಿ ರೂ. ಮೀಸಲಿಡುವುದಾಗಿ ಘೋಷಿಸಿದ್ದಾರೆ.
ಆ ಮೂಲಕ ಯಶ್ ವೇದಿಕೆಯಲ್ಲಿ ಮಾಡಿದ ಮನವಿಗೆ ತಕ್ಷಣವೇ ಸ್ಪಂದನೆ ಸಿಕ್ಕಿದೆ. ಆದರೆ ಇದು ಕಾರ್ಯರೂಪಕ್ಕೆ ಬರಬೇಕಷ್ಟೇ.